ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-01-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಅಸಮರ್ಥ ಮಗನನ್ನು ಸಮರ್ಥನನ್ನಾಗಿ ಮಾಡುವುದು ತಾಯಿಯ ಕರ್ತವ್ಯವಲ್ಲವೇ. ಅಸಮರ್ಥನೆಂದು ಅವನನ್ನು ಕಡೆಗಣಿಸಿದರೆ ಸಮಾಜ ಮುಂದೆ ಅವನನ್ನು ಹೇಗೆ ನೋಡುತ್ತದೆ. ಅಂತಹವರನ್ನು ಸನ್ಮಾರ್ಗಕ್ಕೆ ತರಬೇಕಾದ್ದು ಎಲ್ಲರ ಜವಾಬ್ದಾರಿಯಲ್ಲವೇ?  -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ :ಶುಕ್ರವಾರ , 15.01.2021
ಸೂರ್ಯ ಉದಯ ಬೆ.06.45/ ಸೂರ್ಯ ಅಸ್ತ ಸಂ.06.12
ಚಂದ್ರ ಉದಯ ರಾ.08.32/ ಚಂದ್ರ ಅಸ್ತ ಬೆ.08.21
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ /
ಕೃಷ್ಣ ಪಕ್ಷ /ತಿಥಿ: ದ್ವಿತೀಯಾ (ಬೆ.08.05) ನಕ್ಷತ್ರ: ಧನಿಷ್ಠಾ (ರಾ.05.17)
ಯೋಗ: ಸಿದ್ಧಿ (ರಾ.02.24) ಕರಣ: ಕೌಲವ-ತೈತಿಲ (ಬೆ.08.05-ರಾ.07.51)
ಮಳೆ ನಕ್ಷತ್ರ: ಉತ್ತರಾಷಾಢ ಮಾಸ: ಮಕರ, ತೇದಿ: 02

# ಇಂದಿನ ಭವಿಷ್ಯ :
ಮೇಷ: ಅತ್ತೆ-ಮಾವಂದಿರಿಂದ ಆರ್ಥಿಕ ಸಹಾಯ ಪಡೆಯಲಿದ್ದೀರಿ. ವಾಹನದಿಂದ ಲಾಭವಿದೆ
ವೃಷಭ: ದಾಂಪತ್ಯ ಜೀವನ ಸುಖಮಯವಾಗಿರು ವುದು. ಸಭೆ-ಸಮಾರಂಭಗಳಲ್ಲಿ ಭಾಗವಹಿಸುವಿರಿ
ಮಿಥುನ: ಕಲಾವಿದರಿಗೆ, ಸಂಗೀತಗಾರರಿಗೆ, ನೃತ್ಯ ಪಟುಗಳಿಗೆ, ಹಾಸ್ಯಗಾರರಿಗೆ, ವಿಮರ್ಶಕರಿಗೆ ಲಾಭದಾಯಕ ದಿನ
ಕಟಕ: ತಂದೆಯ ಅನಾರೋಗ್ಯಕ್ಕೆ ಹಣ ವ್ಯಯವಾಗುತ್ತದೆ

ಸಿಂಹ: ಸಮಾಜದಲ್ಲಿ ಗೌರವ, ಪ್ರತಿಷ್ಠೆ ದೊರೆಯುತ್ತದೆ
ಕನ್ಯಾ: ಹೊಸ ಪ್ರಯತ್ನಗಳಲ್ಲೂ ಯಶಸ್ಸು ಸಾಧಿಸುವಿರಿ
ತುಲಾ:ಧರ್ಮ ಕಾರ್ಯಗಳಿಗೆ ಹಣ ಖರ್ಚು ಮಾಡುತ್ತೀರಿ
ವೃಶ್ಚಿಕ: ನಿಮ್ಮ ಕುಟುಂಬದ ಸದಸ್ಯರು, ಆಪ್ತರೇ ನಿಮ್ಮನ್ನು ನಂಬುವುದಿಲ್ಲ

ಧನುಸ್ಸು: ಸರ್ಕಾರದಿಂದ ಸಹಾಯ ಪಡೆಯುವಿರಿ
ಮಕರ: ಈ ಹಿಂದೆ ನಿಮ್ಮಿಂದ ಸಹಾಯ ಪಡೆದ ವ್ಯಕ್ತಿಗಳೇ ನಿಮ್ಮ ವಿರುದ್ಧ ತಿರುಗಿ ಬೀಳುವರು
ಕುಂಭ: ಸ್ತ್ರೀಯರಿಂದ ಸ್ಥಿರಾಸ್ತಿ ದೊರೆಯಬಹುದು
ಮೀನ: ಸಾಧು-ಸಂತರ ದರ್ಶನ ಮಾಡುವಿರಿ

Facebook Comments