ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-01-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನಮ್ಮನ್ನು ನಾವು ಅರಿತುಕೊಳ್ಳುವುದಕ್ಕೆ ಇರುವ ಒಂದು ಸನ್ಮಾರ್ಗವೆಂದರೆ ಅದುವೇ ಆಧಾತ್ಮ. ಮನುಷ್ಯ ಇಂತಹ ವಿದ್ಯೆಯ ಅರಿವನ್ನು ಮೂಡಿಸಿಕೊಳ್ಳಬೇಕು.   -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ :ಶನಿವಾರ , 16.01.2021
ಸೂರ್ಯ ಉದಯ ಬೆ.06.46/ ಸೂರ್ಯ ಅಸ್ತ ಸಂ.06.13
ಚಂದ್ರ ಉದಯ ರಾ.09.18/ ಚಂದ್ರ ಅಸ್ತ ಬೆ.09.13
ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /
ಶುಕ್ಲ ಪಕ್ಷ /ತಿಥಿ: ತೃತೀಯಾ (ಬೆ.07.46) ನಕ್ಷತ್ರ: ಶತಭಿಷಾ (ನಾ.ಬೆ.06.09)
ಯೋಗ: ವ್ಯತೀಪಾತ (ರಾ.07.11) ಕರಣ: ಗರಜೆ-ವಣಿಜ್ (ಬೆ.07.46-ರಾ.07.52)
ಮಳೆ ನಕ್ಷತ್ರ: ಉತ್ತರಾಷಾಢ ಮಾಸ: ಮಕರ, ತೇದಿ: 03

# ಇಂದಿನ ಭವಿಷ್ಯ :
ಮೇಷ: ಬಂಧು-ಮಿತ್ರರ ಸಹಕಾರ ಸಂತಸ ತರಲಿದೆ. ಭಿನ್ನಾಭಿಪ್ರಾಯಗಳು ಶಮನವಾಗುತ್ತವೆ
ವೃಷಭ: ವಿದ್ಯಾರ್ಥಿಗಳ ಪ್ರಯತ್ನಬಲದ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ
ಮಿಥುನ: ನಿರುದ್ಯೋಗಿಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ತಾತ್ಕಾಲಿಕವಾದ ಉದ್ಯೋಗ ಸಿಗಲಿದೆ
ಕಟಕ: ಮನಸ್ಸಿನ ಚಂಚಲತೆ ನಿವಾರಣೆಗಾಗಿ ಈಶ್ವರನ ಆರಾಧನೆ ಮಾಡಿ

ಸಿಂಹ: ಅತಿಥಿಗಳ ಆಗಮನ ದಿಂದ ಖರ್ಚು-ವೆಚ್ಚಗಳು ಅಧಿಕವಾಗಲಿವೆ
ಕನ್ಯಾ: ಆರೋಗ್ಯದ ಬಗ್ಗೆ ಗಮನ ಹರಿಸುತ್ತಿರಬೇಕು
ತುಲಾ: ಸಾಂಸಾರಿಕವಾಗಿ ಪತ್ನಿ-ಮಕ್ಕಳ ಸಹಕಾರ ಉತ್ತಮವಾಗಿರುತ್ತದೆ
ವೃಶ್ಚಿಕ: ಪರಿಸ್ಥಿತಿಯ ಒತ್ತಡಗಳನ್ನು ಆದಷ್ಟು ಪ್ರಯತ್ನಬಲದಿಂದ ತಡೆದುಕೊಳ್ಳಬೇಕು

ಧನುಸ್ಸು: ದೂರ ಸಂಚಾರದಿಂದ ಕಾರ್ಯಸಿದ್ಧಿ
ಮಕರ: ವೃತ್ತಿರಂಗದಲ್ಲಿ ಮುನ್ನಡೆ ಸಾಧಿಸುವಿರಿ
ಕುಂಭ: ವಿದ್ಯಾರ್ಥಿಗಳ ಪರಿಶ್ರಮ ಸಾರ್ಥಕವಾಗಲಿದೆ
ಮೀನ: ಹಣಕಾಸಿನ ನೆರವು ದೊರೆಯುವುದು

Facebook Comments