ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-01-2020)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನುಷ್ಯ ಬೌದ್ಧಿಕವಾಗಿ ಬೆಳೆಯುವುದಿದೆಯಲ್ಲ ಅದು ಎಲ್ಲ ಸಮಸ್ಯೆಗಳಿಗೂ ಪರಿಹಾರ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು.    -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ :ಭಾನುವಾರ, 24.01.2021
ಸೂರ್ಯ ಉದಯ ಬೆ.06.46/ ಸೂರ್ಯ ಅಸ್ತ ಸಂ.06.17
ಚಂದ್ರ ಉದಯ ರಾ.02.28 / ಚಂದ್ರ ಅಸ್ತ ಮ.03.37
ಶಾರ್ವರಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯಾ ಮಾಸ /
ಶುಕ್ಲ ಪಕ್ಷ /ತಿಥಿ: ಏಕಾದಶಿ (ರಾ.09.50) ನಕ್ಷತ್ರ: ರೋಹಿಣಿ(ರಾ.12.01)
ಯೋಗ: ಬ್ರಹ್ಮ (ರಾ.10.28) ಕರಣ: ವಣಿಜ್-ಭದ್ರೆ(ಬೆ.10.01-ರಾ.10.58)
ಮಳೆ ನಕ್ಷತ್ರ: ಶ್ರವಣ  ಮಾಸ: ಮಕರ ತೇದಿ: 11

# ಇಂದಿನ ಭವಿಷ್ಯ :
ಮೇಷ: ಶಾಂತಿ, ಸಾಮರಸ್ಯ ಕಾಪಾಡಿಕೊಳ್ಳಬೇಕು. ದಾಂಪತ್ಯ ಜೀವನ ಸುಖಮಯವಾಗಿರುವುದು
ವೃಷಭ: ಮಕ್ಕಳಿಂದ ತೊಂದರೆ ಎದುರಾಗಲಿದೆ
ಮಿಥುನ: ಸಹೋದ್ಯೋಗಿಗಳು ನಿಮಗೆ ಹಿತವಚನ ಹೇಳುವರು. ಅಣ್ಣ-ತಮ್ಮಂದಿರಲ್ಲಿ ವೈಮನಸ್ಸು ಕಡಿಮೆಯಾಗುತ್ತದೆ
ಕಟಕ: ಉದ್ಯೋಗದಲ್ಲಿ ವಿಶೇಷ ಸ್ಥಾನಮಾನ ಲಭಿಸುತ್ತದೆ. ಪ್ರೇಮಿಗಳಿಗೆ ಉತ್ತಮ ದಿನ

ಸಿಂಹ: ಬೆಲೆಬಾಳುವ ವಸ್ತುಗಳ ಖರೀದಿಗೆ ಆದ್ಯತೆ ಕೊಡುವಿರಿ. ರಾಜಕೀಯ ವ್ಯಕ್ತಿಗಳಿಗೆ ಉತ್ತಮವಾದ ದಿನ
ಕನ್ಯಾ: ಹಿರಿಯರ ಸಲಹೆ ಗಳಿಂದ ಕೆಲವು ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಿ
ತುಲಾ: ಅತ್ತೆ-ಮಾವ ನಿಮಗೆ ಹಣ ಸಹಾಯ ಮಾಡುವರು.ಆದಾಯ ಉತ್ತಮವಾಗಿರುತ್ತದೆ
ವೃಶ್ಚಿಕ: ಸಭೆ-ಸಮಾರಂಭಗಳಲ್ಲಿ ಭಾಗವಹಿಸು ವಿರಿ. ಸ್ನೇಹಿತರು ನಿಮ್ಮ ಮಾತನ್ನು ಗೌರವಿಸುವರು

ಧನುಸ್ಸು: ಪಿತ್ರಾರ್ಜಿತ ಆಸ್ತಿ ನಿಮ್ಮ ಕೈ ಸೇರುತ್ತದೆ. ಕೆಲವು ತಾಪತ್ರಯಗಳು ನಿವಾರಣೆಯಾಗಲಿವೆ.
ಮಕರ: ಪರಸ್ಥಳವಾಸ ಮಾಡಬೇಕಾಗಬಹುದು. ದೂರದ ಬಂಧುಗಳಿಂದ ಸಹಾಯ
ಕುಂಭ: ಸ್ನೇಹಿತರಿಂದ ಮನಸ್ಸಿಗೆ ಬೇಸರವಾಗಲಿದೆ
ಮೀನ: ಅಧಿಕ ಪ್ರಯತ್ನಕ್ಕೆ ಅಲ್ಪ ಫಲ ದೊರೆಯುತ್ತದೆ

Facebook Comments