ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-02-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :ಯಾವುದೇ ಮನುಷ್ಯನ ಬದುಕಿನ ಪರಿಪೂರ್ಣತೆಗೆ ನಿಷ್ಕಾಮ ಕರ್ಮದ ಅಗತ್ಯವಿದೆ. ನಿಷ್ಕಾಮ ಕರ್ಮಕ್ಕೂ ಭಕ್ತಿ ಹಾಗೂ ಧರ್ಮದ ಲೇಪವನ್ನಿಟ್ಟು ಕರ್ಮ ಮಾಡುವ ಮನುಷ್ಯ ತನ್ನ ಬದುಕಿನಲ್ಲಿ ಸಾರ್ಥಕ್ಯ ಭಾವವನ್ನು ಹೊಂದುತ್ತಾನೆ. ತನ್ಮೂಲಕ ಮುಕ್ತಿಯನ್ನು ಹೊಂದುವುದು ಸುಲಭ ಸಾಧ್ಯ. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ : ಬುಧವಾರ, 24.02.2021
ಸೂರ್ಯ ಉದಯ ಬೆ.06.38 / ಸೂರ್ಯ ಅಸ್ತ ಸಂ.06.27
ಚಂದ್ರ ಉದಯ ಮ.03.45/ ಚಂದ್ರ ಅಸ್ತ ರಾ.04.59
ಶಾರ್ವರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು /ಮಾಘ ಮಾಸ / ಶುಕ್ಲ ಪಕ್ಷ
ತಿಥಿ: ದ್ವಾದಶಿ (ಸಾ.06.06) ನಕ್ಷತ್ರ: ಪುನರ್ವಸು (ಮ.01.17)
ಯೋಗ: ಸೌಭಾಗ್ಯ (ರಾ.03.09) ಕರಣ: ಬಾಲವ-ಕೌಲವ (ಸಾ.06.06-ರಾ.05.48)
ಮಳೆ ನಕ್ಷತ್ರ: ಶತಭಿಷಾ ಮಾಸ: ಕುಂಭ ತೇದಿ: 13

# ಇಂದಿನ ಭವಿಷ್ಯ :
ಮೇಷ: ಸತಿ-ಪತಿ ನಡುವೆ ಸಮಸ್ಯೆ ಕಂಡುಬರುವ ಸಾಧ್ಯತೆಗಳಿವೆ. ಸಮಸÉ್ಯಗಳನ್ನು ಬಗೆಹರಿಸಿಕೊಳ್ಳಿ
ವೃಷಭ:ಯಾವುದೇ ಕೆಲಸ ಮಾಡುವುದಾದರೂ ಮುಂದಾಲೋಚನೆಯಿಂದ ಮಾಡಲು ಪ್ರಯತ್ನಿಸಿ
ಮಿಥುನ: ಪ್ರೇಮಿಗಳಿಗೆ ತೊಂದರೆಯಾಗುವ ಸಾಧ್ಯತೆ ಗಳಿವೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ
ಕಟಕ: ಉದ್ಯೋಗದಲ್ಲಿ ಬದಲಾವಣೆಯಾಗಲಿದೆ

ಸಿಂಹ: ಮೇಲಧಿಕಾರಿಗಳಿಂದ ತೀವ್ರ ಮುಜುಗರ ಎದುರಿಸಬೇಕಾಗುತ್ತದೆ
ಕನ್ಯಾ: ವಿದೇಶ ಪ್ರಯಾಣ ದಿಂದ ಹಣ ವ್ಯಯವಾಗುವುದು
ತುಲಾ: ಸಂಬಂಧಿಕರಿಂದ ಮತ್ತು ನೆರೆಹೊರೆಯವರಿಂದ ಅವಮಾನಿಸಲ್ಪಡುವಿರಿ
ವೃಶ್ಚಿಕ: ಹಿರಿಯರು, ಬಂಧು ಗಳೊಂದಿಗೆ ತಾಳ್ಮೆಯಿಂದ ವರ್ತಿಸುವುದು ಉತ್ತಮ. ಒಳ್ಳೆಯ ಸ್ನೇಹಿತರು ದೊರೆಯುವರು

ಧನುಸ್ಸು: ವ್ಯಾಪಾರದಲ್ಲಿ ಏರುಪೇರು ಸಾಮಾನ್ಯ
ಮಕರ: ಅನ್ಯಾಯದಿಂದ ಲಾಭ ಗಳಿಸುತ್ತೀರಿ
ಕುಂಭ: ಮನಸ್ಸಿಗೆ ನೆಮ್ಮದಿ ಇರುವುದಿಲ್ಲ
ಮೀನ: ಆಪ್ತರು ನಿಮ್ಮ ವಿರುದ್ಧ ತಿರುಗಿ ಬೀಳಬಹುದು

Facebook Comments