ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-04-2021)

ಈ ಸುದ್ದಿಯನ್ನು ಶೇರ್ ಮಾಡಿ

 ನಿತ್ಯನೀತಿ : ದೇಹದಲ್ಲಿರುವ ಒಂದೊಂದು ಅಂಗಕ್ಕೂ ಪರಸ್ಪರ ಸಹಕರಿಸುವ ಗುಣವಿದೆ. ಕಾಲಿಗೆ ಮುಳ್ಳು ಚುಚ್ಚಿದರೆ ಕಣ್ಣಿನಲ್ಲಿ ನೀರು ಬರುತ್ತದೆ. ಆ ಸಂದರ್ಭದಲ್ಲಿ ತಕ್ಷಣವೇ ಒಂದು ಕೈ ಕಾಲಿಗೆ ಚುಚ್ಚಿರುವ ಮುಳ್ಳನ್ನು ತೆಗೆದರೆ, ಇನ್ನೊಂದು ಕೈ ಕಣ್ಣಿನಲ್ಲಿ ಬಂದ ನೀರನ್ನು ಒರೆಸುತ್ತದೆ. ದೇಹದಲ್ಲಿರುವ ಅಂಗಗಳಲ್ಲಿ ಪರಸ್ಪರ ಸಹಕಾರ ಇಲ್ಲವೆಂದರೆ ದೇಹದಲ್ಲಿ ಏನೋ ಹೆಚ್ಚು ಕಡಿಮೆಯಾಗಿದೆ ಎಂದು ಮೆದುಳು ಪರೀಕ್ಷಿಸತೊಡಗುತ್ತದೆ. ಅಂದರೆ ಪ್ರತಿಯೊಂದು ಅಂಗವೂ ಅದರದೇ ಆದ ಮಹತ್ವ ಪಡೆದಿವೆ. ಅಂತೆಯೇ ನಾವೆಲ್ಲರೂ ದೇಶ ಕಟ್ಟುವ ಕೆಲಸ ಮಾಡಬೇಕೇ ಹೊರತು ಸಣ್ಣಪುಟ್ಟ ವಿಷಯಗಳಿಗೆ ಒತ್ತುಕೊಟ್ಟುಕೊಂಡು ಜಾತಿ, ವರ್ಗ, ಧರ್ಮದ ವಿಷಯವಾಗಿ ಪರಸ್ಪರ ಕಿತ್ತಾಡಿಕೊಂಡರೆ ದೇಶವನ್ನು ಸುಭದ್ರವಾಗಿ ಕಟ್ಟಲಾಗುವುದಿಲ್ಲ. ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ : ಶನಿವಾರ , 24.04.2021
ಸೂರ್ಯ ಉದಯ ಬೆ.06.06/ ಸೂರ್ಯ ಅಸ್ತ ಸಂ.06.30
ಚಂದ್ರ ಉದಯ ಮ.02.07/ ಚಂದ್ರ ಅಸ್ತ ರಾ.03.03
ಪ್ಲವ  ಸಂವತ್ಸರ / ಉತ್ತರಾಯಣ / ವಸಂತ ಋತು /ಚೈತ್ರ ಮಾಸ / ಶುಕ್ಲ ಪಕ್ಷ
ತಿಥಿ: ದ್ವಾದಶೀ (ರಾ.07.17) ನಕ್ಷತ್ರ: ಪುಬ್ಬಾ-ಉತ್ತರಾ(ಬೆ.06.22-ಬೆ.04.24)
ಯೋಗ: ಧ್ರುವ ಕರಣ: ಭವ-ಬಾಲವ-ಕೌಲವ ಮಳೆ ನಕ್ಷತ್ರ: ಭರಣಿ
ಮಾಸ: ಮೇಷ ತೇದಿ: 11

[ `ಪ್ಲವ’ ಸಂವತ್ಸರದ ಪಂಚಾಂಗ ಮತ್ತು ಈ ವರ್ಷದ ರಾಶಿ ಭವಿಷ್ಯ ]

# ಇಂದಿನ ಭವಿಷ್ಯ :
ಮೇಷ: ದೈವಾನುಗ್ರಹದಿಂದ ಕಷ್ಟ-ನಷ್ಟ ಎದು ರಿಸುವಿರಿ. ದೇಹಾರೋಗ್ಯದಲ್ಲಿ ಏರುಪೇರಾಗಲಿದೆ
ವೃಷಭ: ವೃತ್ತಿ ರಂಗದಲ್ಲಿ ತಾಳ್ಮೆ, ಸಮಾಧಾನದಿಂದ ಇದ್ದು ಸ್ವಸಾಮಥ್ರ್ಯದಲ್ಲಿ ಕಾರ್ಯನಿರ್ವಹಿಸಿ
ಮಿಥುನ: ಅಲಂಕಾರಿಕ ವಸ್ತುಗಳ ಖರೀದಿಗೆ ನಾನಾ ರೀತಿಯಲ್ಲಿ ಧನವ್ಯಯವಾಗಲಿದೆ
ಕಟಕ: ಸ್ಥಿರಾಸ್ತಿ ವ್ಯವಹಾರದಲ್ಲಿ ಗೊಂದಲ ಉಂಟಾಗಲಿದೆ

ಸಿಂಹ: ಅನಗತ್ಯ ಸುಳ್ಳುಗಳಿಂದ ಆಪಾದನೆಗೆ ಗುರಿಯಾಗದಿರಿ
ಕನ್ಯಾ: ಬಂಧುಗಳಿಂದ ವಿಶೇಷ ರೀತಿಯಲ್ಲಿ ಸಹಕಾರ ಸಿಗುತ್ತದೆ
ತುಲಾ: ಕೆಲಸ-ಕಾರ್ಯಗಳು ಅಡಚಣೆಗಳಿಂದಲೇ ಮುಂದುವರಿಯಲಿವೆ
ವೃಶ್ಚಿಕ: ಧಾರ್ಮಿಕ ಕ್ಷೇತ್ರಗಳಲ್ಲಿ ಗೊಂದಲಗಳು ಕಂಡುಬರಲಿವೆ

ಧನುಸ್ಸು: ಆಗಾಗ ದೂರ ಸಂಚಾರ ಮಾಡಬೇಕಾಗು ತ್ತದೆ. ಕಮೀಷನ್ ವ್ಯವಹಾರಗಳಲ್ಲಿ ಅಕ ಲಾಭ
ಮಕರ: ದೈಹಿಕ ಸಮಸ್ಯೆಗಳು ಹೆಚ್ಚಾಗಿ ಕಾಡಲಿವೆ. ಹಿರಿಯರ ಕೋಪಕ್ಕೆ ಕಾರಣರಾಗುವಿರಿ
ಕುಂಭ: ಶತ್ರುಗಳೂ ಮಿತ್ರರಾಗುವರು.
ಮೀನ: ಉದ್ಯೋಗಿಗಳಿಗೆ ಮೇಲಕಾರಿಗಳ ಕಿರುಕುಳವಿರುತ್ತದೆ. ಮುಂಜಾಗ್ರತೆ ವಹಿಸಿ

Facebook Comments