ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-02-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹಿಂದೊಂದು ಕಾಲದಲ್ಲಿ ಯಾವ ಅಂತಃಕರಣದಿಂದ ದೈವದ ದರ್ಶನ ಆಗುತ್ತಿತ್ತೋ, ಸ್ವಸ್ವರೂಪದ ದರ್ಶನವಾಗಿ ಆನಂದ ಆಗುತ್ತಿತ್ತೋ ಅಂತಹ ಅಂತಃಕರಣ ಇಂದು ಧೂಳು ಹಿಡಿದು ಕೂತಿದೆ. ಪ್ರಜ್ಞೆಗೆ ಧೂಳು ಹಿಡಿದಿದೆ. ಬುದ್ಧಿ ಮಸುಕಾಗಿದೆ. ಆಧುನಿಕ ಜಗತ್ತಿನ ವಸ್ತುಗಳ ಬೆನ್ನು ಬಿದ್ದಿದ್ದೇವೆ. ಹಾಗಾಗಿಯೇ ಮನುಷ್ಯರಾಗಿದ್ದರೂ ಮೃಗಗಳ ರೀತಿ ಬದುಕು ಸಾಗಿಸುತ್ತಿದ್ದೇವೆ. ಇದರಿಂದ ಹೊರಬರಬೇಕೆಂದರೆ ಪ್ರತಿಯೊಬ್ಬರ ಅಂತರಂಗ ಶುದ್ಧಿಗೊಂಡು ಆಧ್ಯಾತ್ಮಿಕ ಪ್ರಜ್ಞೆ ಅರಳಬೇಕು. ಭೌತಿಕ ಪ್ರಗತಿಯ ಜೊತೆಗೆ ಬೌದ್ಧಿಕವಾಗಿ ಬೆಳೆಯಬೇಕು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ : ಗುರುವಾರ, 25.02.2021
ಸೂರ್ಯ ಉದಯ ಬೆ.06.37 / ಸೂರ್ಯ ಅಸ್ತ ಸಂ.06.27
ಚಂದ್ರ ಉದಯ ಸಂ.04.43/ ಚಂದ್ರ ಅಸ್ತ ಸಂ.05.49
ಶಾರ್ವರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು /ಮಾಘ ಮಾಸ / ಶುಕ್ಲ ಪಕ್ಷ
ತಿಥಿ: ತ್ರಯೋದಶಿ (ಸಾ.05.19) ನಕ್ಷತ್ರ: ಪುಷ್ಯ (ಮ.01.17)
ಯೋಗ: ಶೋಭನ (ರಾ.01.07) ಕರಣ: ತೈತಿಲ-ಗರಜೆ (ಸಾ.05.19-ರಾ.04.40)
ಮಳೆ ನಕ್ಷತ್ರ: ಶತಭಿಷಾ ಮಾಸ: ಕುಂಭ, ತೇದಿ: 14

# ಇಂದಿನ ಭವಿಷ್ಯ :
ಮೇಷ: ಕುಟುಂಬದ ವಿಚಾರದಲ್ಲಿ ಅನ್ಯ ವ್ಯಕ್ತಿಗಳ ಮಧ್ಯಸ್ಥಿಕೆಯಿಂದ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ
ವೃಷಭ: ಪ್ರೇಮಿಗಳು ಕಾನೂನು ತೊಡಕಿನಿಂದ ಬಿಡಿಸಿ ಕೊಳ್ಳುವರು. ಎಲ್ಲಾ ಸಮಸ್ಯೆಗಳನ್ನು ಎದುರಿಸುವಿರಿ
ಮಿಥುನ: ಅಲಂಕಾರಿಕ ವಸ್ತುಗಳ ಖರೀದಿಯಿಂದ ಹೆಚ್ಚು ಹಣ ವ್ಯಯವಾಗುತ್ತದೆ. ಉತ್ತಮ ದಿನ
ಕಟಕ: ಸಂಗಾತಿಯ ಅನಾರೋಗ್ಯದಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ

ಸಿಂಹ: ಕೆಲಸ-ಕಾರ್ಯಗಳು ಸುಗಮವಾಗಿ ನಡೆಯುತ್ತವೆ
ಕನ್ಯಾ: ಬಂದ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ. ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ
ತುಲಾ: ಭೂ ವ್ಯವಹಾರದಲ್ಲಿ ನಷ್ಟ ಅನುಭವಿಸುವಿರಿ
ವೃಶ್ಚಿಕ: ಶತ್ರುಗಳಿಂದ ದೂರ ಸರಿಯುವಿರಿ

ಧನುಸ್ಸು: ಮಕ್ಕಳು ತೊಂದರೆಯಲ್ಲಿ ಸಿಲುಕುವರು
ಮಕರ: ಬಂಧುಗಳಿಂದ ತೊಂದರೆ ಬರಬಹುದು
ಕುಂಭ: ಉನ್ನತ ಹುದ್ದೆಗೆ ಬಡ್ತಿ ಹೊಂದುವಿರಿ
ಮೀನ: ವಿದ್ಯಾರ್ಥಿಗಳಲ್ಲಿ ಸೋಮಾರಿತನ ಎದ್ದು ಕಾಣುತ್ತದೆ. ಶತ್ರುಗಳಿಂದ ಅಪಾಯವಿದೆ

Facebook Comments