ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-03-2021)

ಈ ಸುದ್ದಿಯನ್ನು ಶೇರ್ ಮಾಡಿ

 ನಿತ್ಯನೀತಿ : ತ್ಯಾಗ ಮತ್ತು ಸೇವೆ ನಮ್ಮ ಸನಾತನ ಆದರ್ಶಗಳು. ನಮ್ಮ ಸ್ವಾರ್ಥವನ್ನು ತ್ಯಾಗ ಮಾಡಿದರೆ ನಾವು ಮಾಡುವ ಪ್ರತಿಯೊಂದು ಕೆಲಸವೂ ಸೇವೆಯೇ ಆಗುತ್ತದೆ. ನಮ್ಮೆಲ್ಲ ಸಾಧನೆಗಳು ಅಂತಃಕರಣದ ಶುದ್ಧಿಗೆ ಕಾರಣವಾಗಬೇಕು. ಆ ನಿಟ್ಟಿನಲ್ಲಿ ಮಾನವ ದೇಹವನ್ನು ಧರಿಸಿ ಬಂದಿರುವ ಭೋಗವೆಂಬ ಅಜ್ಞಾನದಿಂದ ನಿವೃತ್ತಿ ಪಡೆದು ಯೋಗಮಾರ್ಗದ ಮೂಲಕ ಮುಕ್ತಿಯನ್ನು ಹೊಂದಬೇಕು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ : ಮಂಗಳವಾರ, 30.03.2021
ಸೂರ್ಯ ಉದಯ ಬೆ.06.17/ ಸೂರ್ಯ ಅಸ್ತ ಸಂ.06.31
ಚಂದ್ರ ಉದಯ ರಾ.08.15/ ಚಂದ್ರ ಅಸ್ತ ಬೆ.10.03
ಶಾರ್ವರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು /ಮಾಘ ಮಾಸ / ಶುಕ್ಲ ಪಕ್ಷ
ತಿಥಿ: ದ್ವಿತೀಯಾ (ಸಾ.05.28) ನಕ್ಷತ್ರ: ಚಿತ್ತಾ (ಮ.12.22)
ಯೋಗ: ವ್ಯಾಘಾತ (ಮ.01.54) ಕರಣ: ತೈತಿಲ-ಗರಜೆ-ವಣಿಜ್
(ಬೆ.07.11-ಸಾ.05.28-ರಾ.03.46) ಮಳೆ ನಕ್ಷತ್ರ: ಶತಭಿಷಾ
ಮಾಸ: ಮೀನ, ತೇದಿ: 17

# ಇಂದಿನ ಭವಿಷ್ಯ :
ಮೇಷ: ಅಧಿಕ ಖರ್ಚು-ವೆಚ್ಚಗಳ ಬಗ್ಗೆ ಹಿಡಿತ ಸಾಧಿಸಿ. ಅನಿರೀಕ್ಷಿತ ಧನಾಗಮನವಾಗಲಿದೆ
ವೃಷಭ: ವ್ಯವಹಾರದಲ್ಲಿ ಬಂಡವಾಳ ಹೂಡಿಕೆಗೆ ಸಕಾಲ
ಮಿಥುನ: ಹಣಕಾಸಿನ ಪರಿಸ್ಥಿತಿ ಉತ್ತಮವಾಗಿ ದ್ದರೂ ಕೈಯಲ್ಲಿ ಹಣ ನಿಲ್ಲುವುದಿಲ್ಲ
ಕಟಕ: ನಿರುದ್ಯೋಗಿಗಳಿಗೆ ಸದ್ಯದಲ್ಲೇ ತಾತ್ಕಾಲಿಕ ಅವಕಾಶಗಳು ಒದಗಿ ಬರಲಿವೆ

ಸಿಂಹ: ನಿರೀಕ್ಷಿತ ಕೆಲಸ- ಕಾರ್ಯಗಳು ವಿಳಂಬಗತಿಯಲ್ಲಿ ನಡೆಯಲಿವೆ. ಎಚ್ಚರಿಕೆಯಿಂದಿರಿ
ಕನ್ಯಾ: ವೃತ್ತಿ ರಂಗದಲ್ಲಿ ಕಾರ್ಯ ಒತ್ತಡಗಳಿರುತ್ತವೆ
ತುಲಾ: ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತಾ ಹೋಗಲಿದೆ
ವೃಶ್ಚಿಕ: ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗಕ್ಕೆ ಒಳ್ಳೆಯ ಅವಕಾಶಗಳಿವೆ

ಧನುಸ್ಸು: ದಾಂಪತ್ಯದಲ್ಲಿ ಕಲಹಗಳಿದ್ದರೂ ಹೊಂದಾಣಿಕೆಯಿಂದ ಸರಿಯಾಗಲಿದೆ
ಮಕರ: ಆರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ
ಕುಂಭ: ಹಣ ನೀರಿನಂತೆ ಖರ್ಚಾಗಲಿದೆ
ಮೀನ: ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ

Facebook Comments