ರುಂಡ-ಮುಂಡ ಬೇರ್ಪಡಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವ್ಯಕ್ತಿಯ ಭೀಕರ ಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಹನೂರು,ಜೂ.24- ದುಷ್ಕರ್ಮಿಗಳು ವ್ಯಕ್ತಿಯ ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿ ನಂತರ ಪೆಟ್ರೋಲ್ ಹಾಕಿ ಸುಟ್ಟಿರುವ ಘಟನೆ ಹನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾಗಿರುವ ವ್ಯಕ್ತಿಯ ಮುಖ ಭಾಗಶಃ ಸುಟ್ಟು ಕರಕಲಾಗಿರುವುದರಿಂದ ಗುರುತು ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಹನೂರು ತಾಲ್ಲೂಕು ಕೇಂದ್ರದಿಂದ ಕೇವಲ 6 ಕಿ.ಮೀ ದೂರವಿರುವ ಮಣಗಳ್ಳಿ ಗ್ರಾಮದ ಹೊರವಲಯದ ವೆಂಕಟಯ್ಯನ ಕೆರೆ ಸಮೀಪ ದುಷ್ಕರ್ಮಿಗಳು ವ್ಯಕ್ತಿಯ ರುಂಡ-ಮುಂಡ ಬೇರ್ಪಡಿಸಿ ಸುಮಾರು 20 ಮೀಟರ್ ಅಂತರದಲ್ಲಿ ರುಂಡ ಒಂದು ಕಡೆ, ಮುಂಡ ಒಂದು ಕಡೆ ಇಟ್ಟು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ಸುದ್ದಿ ತಿಳಿದ ಹನೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಳೆದೊಂದು ವಾರದ ಹಿಂದೆ ಮಣಗಳ್ಳಿ ಗ್ರಾಮದ ವೆಂಕಟಯ್ಯ(60) ಎಂಬುವರು ಕಾಣೆಯಾಗಿದ್ದರು. ಈ ಬಗ್ಗೆ ದೂರು ಸಹ ದಾಖಲಾಗಿತ್ತು.

ಕೊಲೆಯಾಗಿರುವ ವ್ಯಕ್ತಿ ಚಹರೆ ಸಂಪೂರ್ಣ ಸುಟ್ಟಿರುವುದರಿಂದ ಗುರುತಿಸಲಾಗದ ಪರಿಸ್ಥಿತಿ ಇದ್ದು, ಇದು ವೆಂಕಟಯ್ಯನೋ ಅಥವಾ ಬೇರ್ಯಾರೋ ಎಂಬ ಮಾತುಗಳು ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.

Facebook Comments

Sri Raghav

Admin