ತೋಟಗಾರಿಕೆ ಇಲಾಖೆಯಲ್ಲಿ ಸಕಾಲಕ್ಕಿಲ್ಲ ಬೆಲೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ತೋಟಗಾರಿಕಾ ಇಲಾಖೆಯ 204 ಕಚೇರಿಗಳ ಪೈಕಿ 202 ಕಚೇರಿಗಳಿಗೆ ಸಕಾಲ ಯೋಜನೆಯಡಿ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ಸಕಾಲ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು. ವಿಧಾನಸೌಧದಲ್ಲಿಂದು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ಸಕಾಲ ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂಧನ ಇಲಾಖೆಯ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪೆನಿಯ 368 ಕಚೇರಿಗಳ ಪೈಕಿ 333 ಕಚೇರಿಗಳಿಗೂ ಸಕಾಲ ಯೋಜನೆ ಯಡಿ ಅರ್ಜಿ ಬಂದಿಲ್ಲ.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ 37 ಕಚೇರಿಗಳ ಪೈಕಿ 32 ಕಚೇರಿಗಳಿಗೆ ಅರ್ಜಿಯೇ ಸಲ್ಲಿಕೆಯಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಬೆಂಗಳೂರು ನಗರ ಜಿಲ್ಲೆಯ 824 ಕಚೇರಿ ಹಾಗೂ ತುಮಕೂರಿನ 418, ಮೈಸೂರಿನ 398 ಕಚೇರಿಗಳಿಗೆ ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಕೆಯಾಗಿಲ್ಲ. ಏಕೆ ಅರ್ಜಿಗಳು ಸಲ್ಲಿಕೆಯಾಗಿಲ್ಲ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಸಚಿವ ನೇತೃತ್ವದಲ್ಲಿ ರಾಜ್ಯಮಟ್ಟದಲ್ಲಿ ವಿಡಿಯೋ ಸಂವಾದ ನಡೆಸಿದರೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ವಿಡಿಯೋ ಸಂವಾದ ನಡೆಸಲಾಗುವುದು ಎಂದರು.

ಸಕಾಲ ಯೋಜನೆಯಡಿ ಅತಿ ಹೆಚ್ಚು ಅಂದರೆ ಶೇ.19.23ರಷ್ಟು ಅರ್ಜಿ ತಿರಸ್ಕøತವಾಗಿರುವ ಬೀದರ್ ಜಿಲ್ಲೆಗೆ ಅಧಿಕಾರಿಗಳ ತಂಡ ತೆರಳಿ ಪರಿಶೀಲನೆ ನಡೆಸಲಿದೆ ಎಂದು ಹೇಳಿದರು. ಶೇ.20ರಷ್ಟು ಅರ್ಜಿಗಳು ತಿರಸ್ಕøತವಾದರೆ ಮೂಲ ಉದ್ದೇಶಕ್ಕೆ ಪೆಟ್ಟು ಬಿದ್ದಂತಾಗುತ್ತದೆ ಎಂದ ಅವರು, ಅಕ್ಟೋಬರ್ ತಿಂಗಳಿನಲ್ಲಿ ಔರಾದ್ ತಾಲ್ಲೂಕಿನಲ್ಲಿ ಶೇ.48.51ರಷ್ಟು, ನವೆಂಬರ್ ತಿಂಗಳಲ್ಲಿ ಕೊಟ್ಟೂರು ತಾಲ್ಲೂಕಿನಲ್ಲಿ ಶೇ.37.5ರಷ್ಟು ಅರ್ಜಿಗಳು ತಿರಸ್ಕøತವಾಗಿವೆ ಎಂದರು.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಾರರ ಕಲ್ಯಾಣ ಮಂಡಳಿಯಲ್ಲಿ ಶೇ.46.75ರಷ್ಟು, ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯಲ್ಲಿ ಶೇ.46.59ರಷ್ಟು, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಲ್ಲಿ ಶೇ.33.33ರಷ್ಟು ಅರ್ಜಿಗಳು ಅಕ್ಟೋಬರ್ ತಿಂಗಳಿನಲ್ಲಿ ತಿರಸ್ಕøತವಾಗಿವೆ ಎಂದು ಮಾಹಿತಿ ನೀಡಿದರು.

ಸಕಾಲ ಕಾಲ್ ಸೆಂಟರ್‍ಗೆ ನಿತ್ಯ 2ಸಾವಿರ ಕರೆಗಳು ಬರುತ್ತಿದ್ದು, ಬೆಂಗಳೂರು ನಗರಕ್ಕೆ ಅತಿ ಹೆಚ್ಚು ಕರೆಗಳು ಬಂದಿದ್ದರೆ, ಕೊಡಗು ಜಿಲ್ಲೆಗೆ ಅತಿ ಕಡಿಮೆ ಕರೆಗಳು ಬಂದಿ ವೆ ಎಂಬ ಮಾಹಿತಿ ನೀಡಿದರು. ಸೇವಾ ಸಿಂಧು ಯೋಜನೆಯ end to end ಡಿಜಿಟಲ್ ಸೇವಾ ವಿಭಾಗದಲ್ಲಿ ಡಿಜಿಟಲ್ ಟ್ರ್ಯಾನ್ಸ್‍ಫಾರ್ಮೆಷನ್ ಅವಾರ್ಡ್ ಬಂದಿದೆ ಎಂದು ಹೇಳಿದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಆರಂಭಿಸಿರುವ ಜನಸೇವಕಾ (ನಾಗರಿಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳು) ಸಂಖ್ಯೆಯನ್ನು 160ಕ್ಕೆ ಹೆಚ್ಚಳ ಮಾಡಿದ್ದು, ಈ ಯೋಜನೆಯನ್ನು ಮಹದೇವಪುರ, ಬೊಮ್ಮನಹಳ್ಳಿ, ರಾಜಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ವಿಸ್ತರಿಸಲಾಗುವುದು ಎಂದು ಹೇಳಿದರು.

Facebook Comments