ಗಾಂಜಾ ಸಾಗಣೆ : ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಹೊಸಕೋಟೆ,ಜೂ.27- ಅಕ್ರಮವಾಗಿ ಗಾಂಜಾ ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ಮೂರು ಮಂದಿ ಅಂತಾರಾಜ್ಯ ಆರೋಪಿಗಳನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣದ ನಕ್ಕಲಪಟ್ಟು ಗ್ರಾಮದ ರಮೇಶ್ ಎಸ್ ಸೀನಾಲಿ ರಮೇಶ್ ಅಲಿಯಾಸ್ ಕಲ್ಯಾಣ್(30) , ವಿಶಾಖಪಟ್ಟಣದ ಧರ್ಮನಾಗರಂ ಗ್ರಾಮದ ಜಿ.ಸೀನುಗೊಂಪ ಶ್ರೀನಿವಾಸ, ಬೆಂಗಳೂರು ಕೂಡ್ಲುಗೇಟ್ ಮುನೇಶ್ವರನಗರ ವಾಸಿ ಅಕ್ರಮ ಅಹಮದ್ ಖಾನ್(25) ಬಂಧಿತ ಆರೋಪಿಗಳು.

ಆರೋಪಿಗಳು ಆಂಧ್ರಪ್ರದೇಶೆದ ಕಡೆಯಿಂದ ಕೋಲಾರ ಮಾಗವಾಗಿ ಲಗೇಜ್ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದರು ಎಂದು ವಿಚಾರಣೆವ ವೇಳೆ ಗೊತ್ತಾಗಿದೆ. ಬಂಧಿತರಿಂದ ಹಣ್ಣು ಮತ್ತು ತರಕಾರಿ ತುಂಬುವ ಪ್ಲಾಸ್ಟಿಕ್‍ಟ್ರಕ್‍ನ ಮಧ್ಯದಲ್ಲಿ ಸೆಲ್ಲೋಟೇಪ್ ಸುತ್ತಿ ಬಚ್ಚಿಟ್ಟಿದ್ದ 8 ಕೆಜಿ ತೂಕದ ಎಲೆ, ಹೂವು, ಕಾಂಡ, ಬೀಜ ಮಿಶ್ರಿತ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರವಿ.ಡಿ ಚನ್ನಣ್ಣನವರ್, ಪೆÇಲೀಸ್ ಅಧೀಕ್ಷಕ ಸಜೀತ್ ಅವರ ಮಾರ್ಗದರ್ಶನದಲ್ಲಿ ಹೊಸಕೋಟೆ ಉಪವಿಭಾಗದ ಪೆಲೀಸ್ ಉಪಾಧೀಕ್ಷಕರಾದ ಎನ್.ಬಿ.ಸಕ್ರಿ ನೇತೃತ್ವದಲ್ಲಿ ಹೊಸಕೋಟೆ ವೃತ್ತ ಸಿಪಿಐ ವಿ.ಡಿ.ಶಿವರಾಜು, ಪಿಎಸ್‍ಐ ಸಿ.ಎಂ.ರಾಜು ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments