ವಿದೇಶಗಳಿಂದ ಬರುವ ಕನ್ನಡಿಗರಿಗೆ ಸ್ಟಾರ್ ಹೊಟೇಲ್‍ಗಳಲ್ಲಿ ಕ್ವಾರಂಟೈನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 7- ವಿದೇಶದಲ್ಲಿ ನೆಲೆಸಿರುವ 7000 ಕನ್ನಡಿಗರು ರಾಜ್ಯಕ್ಕೆ ಆಗಮಿಸಲಿದ್ದು, ಅವರು ಇಚ್ಛಿಸುವ ಸ್ಟಾರ್ ಹೊಟೇಲ್‍ಗಳಲ್ಲಿ ಕ್ವಾರಂಟೈನ್‍ನಲ್ಲಿರಲು ಬಿಬಿಎಂಪಿ ಸಮ್ಮತಿಸಿದೆ.

ಕ್ವಾರಂಟೈನ್‍ನಲ್ಲಿರಲು ಫೈವ್ ಸ್ಟಾರ್, ತ್ರಿ ಸ್ಟಾರ್ ಹೊಟೇಲ್‍ಗಳನ್ನು ಆರಿಸಿಕೊಳ್ಳಬಹುದಾಗಿದೆ. ಆದರೆ, ಅದರ ಬಾಡಿಗೆಯನ್ನು ಅವರೇ ಪಾವತಿಸಬೇಕಾಗಿದೆ.
ವಿದೇಶದಲ್ಲಿರುವ 7000 ಮಂದಿಯನ್ನು ಏರ್‍ಲಿಫ್ಟ್ ಮಾಡಲು ತೀರ್ಮಾನಿಸಲಾಗಿದ್ದು, ಇದೇ 8ರಂದು ಆಗಮಿಸಲಿರುವ ವಿಮಾನದಲ್ಲಿ ಸುಮಾರು 300 ಕನ್ನಡಿಗರು ರಾಜ್ಯಕ್ಕೆ ಬಂದಿಳಿಯಲಿದ್ದಾರೆ.

ರಾಜ್ಯಕ್ಕೆ ಬರುವವರು 14 ದಿನ ಕ್ವಾರಂಟೈನ್‍ನಲ್ಲಿ ಇರಬೇಕಾಗುತ್ತದೆ. ಹೀಗಾಗಿ ಅವರಿಗೆ ತ್ರಿ ಸ್ಟಾರ್, ಫೈವ್ ಸ್ಟಾರ್ ಹೊಟೇಲ್ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.

ರಾಜ್ಯಕ್ಕೆ ಆಗಮಿಸಲಿರುವ ವಿದೇಶಿ ಕನ್ನಡಿಗರು ತಮಗೆ ಯಾವ ಸ್ಟಾರ್ ಹೊಟೇಲ್ ಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಬಾಡಿಗೆಯನ್ನು ಅವರೇ ಪಾವತಿಸಬೇಕಾಗಿದೆ.

ಈಗಾಗಲೇ ಸ್ಟಾರ್ ಹೊಟೇಲ್‍ಗಳ ಕ್ವಾರಂಟೈನ್ ಅವಧಿಯ ದರ ನಿಗದಿ ಮಾಡಲಾಗಿದ್ದು, ವಿದೇಶದಿಂದ ಆಗಮಿಸುವವರು ತಾವು ಇಚ್ಛಿಸುವ ಹೊಟೇಲ್‍ನಲ್ಲಿ ಕ್ವಾರಂಟೈನ್‍ನಲ್ಲಿರಬಹುದು.

Facebook Comments

Sri Raghav

Admin