ಜಗತ್ತಿನಲ್ಲೇ ಉತ್ತರ ಭಾರತದಲ್ಲಿ ಗರಿಷ್ಠ ತಾಪಮಾನ ದಾಖಲು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಜೈಪುರ, ಮೇ 27- ಜಾಗತಿಕ ತಾಪಮಾನದಲ್ಲಿ ಭಾರತದ ಉತ್ತರ ಭಾಗ ಗರಿಷ್ಠ ಉಷ್ಣಾಂಶ ದಾಖಲಿಸಿದ್ದು, ಉಷ್ಣ ಹವೆಯಿಂದ ರಾಜಧಾನಿ ದೆಹಲಿ ಮತ್ತು ರಾಜಸ್ಥಾನದ ಮಂದಿ ಬೆಂದು ಬಸವಳಿದಿದ್ದಾರೆ.

ರಾಜಸ್ಥಾನದ ಚುರು ಪ್ರದೇಶದಲ್ಲಿ ಗರಿಷ್ಠ 50 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಜೈಪುರ, ಉದಯ್‍ಪುರ್ ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ತಾಪಮಾನ ತೀವ್ರ ಏರಿಕೆಯಾಗಿದ್ದು, ರಣ ಬಿಸಿಲಿನಿಂದ ಜನತೆ ಹೈರಾಣಾಗಿದ್ದಾರೆ.

ಇತ್ತ ರಾಜಧಾನಿ ನವದೆಹಲಿಯಲ್ಲೂ ಪರಿಸ್ಥಿತಿ ಹೊರತಾಗಿಲ್ಲ. ದೆಹಲಿಯ ಬಹುತೇಕ ಭಾಗಗಳಲ್ಲಿ ಇಂದು 17.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಉಷ್ಣ ಹವೆಯಿಂದ ಜನರು ನಿತ್ರಾಣಗೊಂಡಿದ್ದಾರೆ. ಉತ್ತರ ಪ್ರದೇಶ ಸೇರಿದಂತೆ ದೇಶದ ಇತರೆ ಭಾಗದ ರಾಜ್ಯಗಳಲ್ಲೂ ರಣ ಬಿಸಿಲಿನ ತಾಪ ಮುಂದುವರೆದಿದ್ದು, ಉರಿಯುವ ಬಿಸಿಲು ಮತ್ತು ಉಷ್ಣ ಹವೆಯಿಂದ ಜನರು ಕಂಗಾಲಾಗಿದ್ದಾರೆ.

ಬಿಸಿಗಾಳಿಯ ಪರಿಣಾಮ ವೃದ್ದರು ಹಾಗೂ ಮಕ್ಕಳು ಅಸ್ವಸ್ಥರಾಗಿದ್ದಾರೆ. ದೆಹಲ ನಿರ್ಜಲೀಕರಣವಾದ ಪರಿಣಾಮ ಆನೇಕರಲ್ಲಿ ಆಯಾಸ, ಬಳಲಿಕೆ ಕಂಡು ಬಂದಿದೆ. ಬಿಸಿಲಿನಲ್ಲಿ ಅನಗತ್ಯವಾಗಿ ಓಡಾಡದಂತೆ ಮತ್ತು ಅತಿ ಹೆಚ್ಚು ನೀರು ಮತ್ತು ಪೌಷ್ಠಿಕಾಂಶ ಸೇವಿಸುವಂತೆ ಆರೋಗ್ಯ ಇಲಾಖೆ ನಾಗರಿಕರಿಗೆ ಸೂಚನೆ ನೀಡಿದೆ.

Facebook Comments