ಮನೆ ಮೇಲ್ಛಾವಣಿ ಕುಸಿದು ಮಗು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬಾಗಲಕೋಟೆ, ಅ.31- ನಿರಂತರ ಮಳೆಯಿಂದ ಶಿಥಿಲಗೊಂಡಿದ್ದ ಮನೆಯ ಮೇಲ್ಛಾವಣಿ ಕುಸಿದು 11 ತಿಂಗಳ ಹಸುಗೂಸು ಮೃತಪಟ್ಟು, ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ತೆರದಾಳ ತಾಲೂಕಿನ ತಮದಡ್ಡಿಯಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ.

ಅಚಲ ಬುಜಬಲಿ ತಿಮ್ಮಣ್ಣವರ ಮೃತಪಟ್ಟ ಮಗು. ತಾಯಿ ಅಕ್ಷತಾ ಬುಜಬಲಿಲ ತಿಮ್ಮಣ್ಣವರ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದ ತಮದಡ್ಡಿ ಗ್ರಾಮ ಪ್ರವಾಹಕ್ಕೆ ಸಿಲುಕಿತ್ತು. ಇವರ ಮನೆ ನೀರಿನಿಂದ ಜಲಾವೃತಗೊಂಡು ಶಿಥಿಲಗೊಂಡಿತ್ತು.

ನಿನ್ನೆ ರಾತ್ರಿ ಮನೆಯಲ್ಲಿ ನಾಲ್ವರು ಮಲಗಿದ್ದರು. ಬೆಳಗ್ಗಿನ ನ ಜಾವ 4 ಗಂಟೆ ಸುಮಾರಿಗೆ ಇಬ್ಬರು ಎದ್ದು ಹೊರಗಡೆ ಬಂದಿದ್ದರು. ಆದರೆ ತಾಯಿ, ಮಗು ಇನ್ನೂ ಮಲಗಿದ್ದರು. ಈ ಸಂದರ್ಭದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಪರಿಣಾಮ ಮಗು ಮೃತಪಟ್ಟು ತಾಯಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಈ ಘಟನೆ ತೇರದಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗದಗ, ಹುಬ್ಬಳ್ಳಿ, ಧಾರವಾಡ, ರಾಯಚೂರು, ವಿಜಯಪುರ ಸೇರಿದಂತೆ ಅನೇಕ ಭಾಗಗಳಲ್ಲಿ ಮಣ್ಣಿನ ಮನೆಗಳು ಹೆಚ್ಚಾಗಿವೆ. ಸತತ ಮಳೆ ಮತ್ತು ಪ್ರವಾಹದಿಂದ ಈಗಾಗಲೇ ಸಾಕಷ್ಟು ಮನೆಗಳು ಕುಸಿದು ಬಿದ್ದಿವೆ. ಅಳಿದುಳಿದ ಮನೆಗಳಲ್ಲಿ ಕೆಲವರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಶಿಥಿಲಗೊಂಡಿರುವ ಮನೆಗಳು ಬೀಳುತ್ತಿದ್ದು ಪ್ರಾಣಹಾನಿ ಪ್ರಕರಣಗಳು ಹೆಚ್ಚಾಗುತ್ತಿವೆ.

Facebook Comments