ರಣರಾಗವಾದ ಲಂಕಾ ಸಂಸತ್, ವಿಪಕ್ಷ ಸದಸ್ಯರತ್ತ ಖಾರದ ಪುಡಿ ಎರಚಿ ಹೈಡ್ರಾಮಾ

ಈ ಸುದ್ದಿಯನ್ನು ಶೇರ್ ಮಾಡಿ

Lanka

ಕೊಲಂಬೋ. ನ. 17 : ಶ್ರೀಲಂಕಾ ಸಂಸತ್ತಿನಲ್ಲಿ ಎರಡನೇ ದಿನವಾದ ನಿನ್ನೆಯೂ  ಕೂಡ ಗದ್ದಲ, ಕೋಲಾಹಲ ಜೋರಾಗಿತ್ತು . ಮಹಿಂದಾ ರಾಜಪಕ್ಸೆಯನ್ನು ಬೆಂಬಲಿಸಿದ ಹಲವು ಸಂಸತ್‌ ಸದಸ್ಯರು ಪೊಲೀಸ್‌ ಅಧಿಕಾರಿಗಳತ್ತಲೂ ಕುರ್ಚಿ ಎಸೆದಿದ್ದು, ವಿಪಕ್ಷ ಸದಸ್ಯರತ್ತ ಖಾರದ ಪುಡಿಯನ್ನು ಎರಚಾಡಿದ್ದಾರೆ.  ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶ್ರೀಲಂಕಾ ಸಂಸದ ವಿಜೀತಾ ಹೆರಾತ್, ಸಂವಿಧಾನದ ಪ್ರತಿಯ ಮೂಲಕವೂ ಸಿರಿಸೇನಾ – ರಾಜಪಕ್ಸೆ ಬೆಂಬಲಿಗ ) ಸದಸ್ಯರು ನನ್ನ ಮೇಲೆ ಹಲ್ಲೆ ಮಾಡಿದರು. ನೀರಿಗೆ ಖಾರದ ಪುಡಿ ಹಾಕಿ ವಿಪಕ್ಷ ಸಂಸದರನ್ನು ದಾಳಿ ಮಾಡಿದರು” ಎಂದು ಊರಿದ್ದಾರೆ.

ಮತ್ತೊಬ್ಬ ಸಂಸದರೂ ಸಹ ಈ ಬಗ್ಗೆ ಮಾತನಾಡಿದ್ದು, ”ನೀರಿಗೆ ಖಾರದ ಪುಡಿ ಮಿಶ್ರಣ ಮಾಡಿ ದಾಳಿ ಮಾಡಿದ್ದು, ಕೂಡಲೇ ಆಸ್ಪತ್ರೆಗೆ ಹೋಗುವಂತಾಯಿತು” ಎಂದು ಹೇಳಿರುವುದು ದ್ವೀಪ ರಾಷ್ಟ್ರದ ಮಾಧ್ಯಮಗಳು ವರದಿ ಮಾಡಿವೆ. ಜತೆಗೆ, ಪೊಲೀಸರ ಮೇಲೂ ರಾಜಪಕ್ಸೆ ಬೆಂಬಲಿಗರು ದಾಳಿ ಮಾಡಿದ್ದಾರೆ ಎಂದೂ ವರದಿಯಾಗಿವೆ.

ಅಕ್ಬೋಬರ್ 26ರಿಂದಲೂ ರಾಜಕೀಯ ಬಿಕ್ಕಟ್ಟನ್ನು ಶ್ರೀಲಂಕಾ ಎದುರಿಸುತ್ತಿದೆ. ಶ್ರೀಲಂಕಾ ಪ್ರಧಾನಿಯಾಗಿದ್ದ ವಿಕ್ರಮಸಿಂಘೆಯನ್ನು ಹುದ್ದೆಯಿಂದ ಕೆಳಗಿಳಿಸಿ ಮಹಿಂದಾ ರಾಜಪಕ್ಸೆಯನ್ನು ಪ್ರಧಾನಿಯನ್ನಾಗಿ ಅಲ್ಲಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ನೇಮಕ ಮಾಡಿದ್ದರು

Facebook Comments