ಬಾಡಿಗೆ ಕೇಳಿದ ಮನೆಯೊಡತಿಯ ಕತ್ತುಕೊಯ್ದು ಸುಟ್ಟು ಹಾಕಿದ ಬಾಡಿಗೆದಾರರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.5-ಬಾಡಿಗೆ ವಿಚಾರದಲ್ಲಿ ಜಗಳವಾಗಿ ನಿವೃತ್ತ ಉಪ ತಹಸೀಲ್ದಾರ್ ಅವರನ್ನು ಕೊಲೆ ಮಾಡಿರುವ ಘಟನೆ ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಜೇಶ್ವರಿ (60) ಕೊಲೆಯಾಗಿರುವ ನಿವೃತ್ತ ಉಪ ತಹಸೀಲ್ದಾರ್. ಪಾರ್ವತಿಪುರದಲ್ಲಿ ಇವರಿಗೆ ಸೇರಿದ ಮನೆಯನ್ನು ಬಾಡಿಗೆಗೆ ನೀಡಿದ್ದರು. ನಾಲ್ಕೈದು ತಿಂಗಳಿನಿಂದ ಬಾಡಿಗೆದಾರ ಬಾಡಿಗೆ ನೀಡದ ಕಾರಣ ಮನೆ ಬಳಿ ಹೋಗಿ ರಾಜೇಶ್ವರಿ ಬಾಡಿಗೆ ಹಣ ನೀಡುವಂತೆ ಕೇಳಿದ್ದಾರೆ.

ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾದಾಗ ರಾಜೇಶ್ವರಿ ಅವರನ್ನು ಮನೆಯೊಳಗೆ ಎಳೆದು ಬಾಡಿಗೆದಾರ ಕತ್ತುಕೊಯ್ದು ಕೊಲೆ ಮಾಡಿ ನಂತರ ಶವವನ್ನು ಆಟೋದಲ್ಲಿ ಬಿಡದಿ ಬಳಿ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾರೆ.ಅವರ ಮೊಬೈಲ್‍ಅನ್ನು ಬಿಸಾಡಿದ್ದಾರೆ. ರಾಜೇಶ್ವರಿ ಅವರು ಕಾಣೆಯಾದ ಬಗ್ಗೆ ವಿವಿ ಪುರಂ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿವಿ ಪುರಂ ಠಾಣೆ ಪೊಲೀಸರು ತನಿಖೆ ಕೈಗೊಂಡಾಗ ರಾಜೇಶ್ವರಿ ಕೊಲೆಯಾಗಿರುವುದು ಕಂಡುಬಂದಿದೆ. ಪ್ರಕರಣ ಸಂಬಂಧ ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

Facebook Comments