ಮೋದಿ-ಟ್ರಂಪ್ ಕುಚಿಕು ಗೆಳೆತನ ನೋಡಿ ಉರಿದುಬಿದ್ದ ಕಾಂಗ್ರೆಸ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.23- ಹೌಸ್ಟನ್‍ನಲ್ಲಿ ನಡೆದ ಹೌದಿ-ಮೋದಿ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.  ಪ್ರಧಾನಿ ಮೋದಿಯವರು ಭಾರತದ ವಿದೇಶಾಂಗ ನೀತಿಯ ಸಮಯ ತತ್ವವನ್ನು ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

ಅಬ್‍ಕಿ ಬಾರ್ ಟ್ರಂಪ್ ಸರ್ಕಾರ್ ಎಂದು ಮೋದಿ ಈ ಸಮಾವೇಶದಲ್ಲಿ ಹೇಳುವ ಮೂಲಕ ಈಗಿನಿಂದಲೇ ಅಮೆರಿಕ ಅಧ್ಯಕ್ಷರ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮ ಟ್ವೀಟ್‍ನಲ್ಲಿ ಟೀಕಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರೇ ನೀವು ಭಾರತೀಯ ವಿದೇಶಾಂಗ ನೀತಿಯಂತೆ ದೇಶೀಯ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಸಮಯ ತತ್ವವನ್ನು ಹಾಳು ಮಾಡಿದ್ದೀರಿ. ಇದು ಭಾರತದ ದೀರ್ಘಕಾಲೀನ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ಎಸಗಿದ ಅಪಚಾರ ಇದಾಗಿದೆ ಎಂದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಮೋದಿ ಹಾಡಿಹೊಗಳಿರುವುದು ಸರಿಯಲ್ಲ. ಇದರಿಂದ ಭಾರತದ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ ಹೇಳಿರುವ ಅವರು, ಟ್ರಂಪ್‍ಗಾಗಿ ನೀವು ಸಕ್ರಿಯವಾಗಿ ಪ್ರಚಾರ ಮಾಡುವುದು ಭಾರತ ಮತ್ತು ಅಮೆರಿಕ ಎರಡನ್ನೂ ಸಾರ್ವಭೌಮ ರಾಷ್ಟ್ರಗಳು ಮತ್ತು ಪ್ರಜಾಪ್ರಭುತ್ವಗಳ ಉಲ್ಲಂಘನೆ ಮಾಡಿದಂತಾಗಿದೆ ಎಂದು ಹೇಳಿದ್ದಾರೆ.

ನೀವೊಬ್ಬರು ಪ್ರಧಾನಿಯಾಗಿದ್ದೀರಾ ಎಂಬುದನ್ನು ನೆನಪಿನಲ್ಲಿಡಿ. ನೀವು ಯುಎಸ್‍ಎ ಸ್ಟಾರ್ ಪ್ರಚಾರಕರಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಆನಂದ್ ಶರ್ಮ ಮನವರಿಕೆ ಮಾಡಿಕೊಟ್ಟರು.

Facebook Comments

Sri Raghav

Admin