ಮಹತ್ವದ ಹೌಡಿ-ಮೋದಿ ಸಮಾವೇಶಕ್ಕೆ ಕ್ಷಣಗಣನೆ

ಈ ಸುದ್ದಿಯನ್ನು ಶೇರ್ ಮಾಡಿ

ಹೌಸ್ಟನ್, ಸೆ.21- ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಮೂಲದ ಅಮೆರಿಕನ್ನರನ್ನು ಉದ್ದೇಶಿಸಿ ನಾಳೆ ಐತಿಹಾಸಿಕ ಜಂಟಿ ಭಾಷಣಕ್ಕೆ ಕ್ಷಣಗಣನೆ ಆರಂಭವಾಗಿದೆ.ಈ ಇಬ್ಬರು ನಾಯಕರ ಜಂಟಿ ಭಾಷಣದ ಬಗ್ಗೆ ಇಡೀ ವಿಶ್ವ ಕುತೂಹಲದಿಂದ ವೀಕ್ಷಿಸುತ್ತಿದೆ.

ಮೋದಿ ಅವರ ಅಮೆರಿಕಾ ಪ್ರವಾಸ ಮತ್ತು ನಾಳೆಯ ಹೌಡಿ ಮೋದಿ ಸಮಾವೇಶ ಉಭಯ ದೇಶಗಳ ನಡುವಣ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಮೋದಿ ಮತ್ತು ಟ್ರಂಪ್ ಈ ನಡುವೆ ಜಂಟಿಯಾಗಿ ಸುದ್ದಿಗೋಷ್ಠಿ ಮಾತನಾಡಿದ್ದರಾದರೂ ನಾಳೆ ಅಮೆರಿಕದ ತೈಲ ರಾಜಧಾನಿ ಟೆಕ್ಸಾಸ್‍ನನ ಹೌಸ್ಟನ್ ನಗರಿಯಲ್ಲಿ ನಡೆಯಲಿರುವ ಭಾರತ ಸಂಜಾತ ಅಮೆರಿಕನ್ನರ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ಭಾಷಣ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.

ನಾಳಿನ ಜಂಟಿ ಭಾಷಣದಲ್ಲಿ ಉಭಯ ನಾಯಕರು ಕೆಲವು ಮಹತ್ವದ ನಿರ್ಧಾರ ಮತ್ತು ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆ ಇದ್ದು ವಿಶ್ವದ ಅನೇಕ ದೇಶಗಳ ಕುತೂಹಲ ಕೆರಳಿಸಿದೆ.
ಹೌಸ್ಟನ್‍ನ ಹೌಡಿ-ಮೋದಿ ಸಮಾವೇಶಕ್ಕೆ ಮುನ್ನವೇ ಟೆಕ್ಸಾಸ್‍ನ ಅನೇಕ ಪ್ರಾಂತ್ಯಗಳಲ್ಲಿ ಚಂಡಮಾರುತ ಮತ್ತು ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ನಾಳೆ ವೇಳೆಗೆ ಪ್ರಕೃತಿ ವಿಕೋಪ ಶಮನವಾಗಲಿದೆ ಎಂಬ ಆಶಾ ಭಾವನೆ ಇದೆ.

Facebook Comments