ನಮ್ಮ ತಂದೆಯವರ ಹೋರಾಟದಿಂದ ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪನೆಯಾಯಿತು : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಅ.23- ಬ್ರಿಟಿಷರ ವಿರುದ್ಧ ಹೋರಾಡಿಹಿಂದೆ ದ ನಾಡಿನ ಪ್ರಥಮ ಧೀಮಂತ, ಶ್ರೇಷ್ಠ ಮಹಿಳೆ ರಾಣಿ ಕಿತ್ತೂರು ರಾಣಿ ಚೆನ್ನಮ್ಮಳ ತ್ಯಾಗ, ಬಲಿದಾನವನ್ನು ಜನರು ಸ್ಮರಿಸುವಂತ ದಿನವಾಗಿದೆ. ಬೆಳಗಾವಿಯಿಂದ ಬೆಂಗಳೂರಿನವರೆಗೆ ಚೆನ್ನಮ್ಮಳ ಜ್ಯೋತಿ ಬೆಳಗಿಸಿದ್ದು ನನ್ನ ಸೌಭಾಗ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಅಂಗವಾಗಿ ಚೆನ್ನಮ್ಮನ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದರು.ಬ್ರಿಟಿಷ್‍ರ ವಿರುದ್ಧ ರಣಕಹಳೆ ಊದಿದ ರಾಣಿ ಚೆನ್ನಮ್ಮ ಮೂರ್ತಿ ನಗರದಲ್ಲಿ ನಿರ್ಮಿಸಲು ದೊಡ್ಡ ಹೋರಾಟವಾಗಿತ್ತು.ನಮ್ಮ ತಂದೆಯವರು ಉಸ್ತುವಾರಿ ಸಚಿವರಿದ್ದಾಗ ಎರಡು ವರ್ಷದ ಸುದೀರ್ಘ ಹೋರಾಟದ ಫಲವಾಗಿ ಈ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದು ಸ್ಮರಿಸಿದರು.

ಈಗ ಕಿತ್ತೂರ ರಾಣಿ ಚೆನ್ನಮ್ಮ ಉತ್ಸವ ಮಾಡುವ ಮಹತ್ತರ ಕಾರ್ಯ ನನ್ನ ಪಾಲಿಗೆ ಬಂದಿದೆ. 2011ರಲ್ಲಿ ನಾನು ಉಸ್ತುವಾರಿ ಸಚಿವನಿದ್ದಾಗ ಕಿತ್ತೂರು ಪ್ರಾಕಾರ ಮಾಡಿ ಅಂದು ಎಂಟು ಕೋಟಿ ರೂ. ಬಿಡುಗಡೆಗೊಳಿಸಿ ಆ ಕೆಲಸ ಪ್ರಾರಂಭಿಸಲಾಗಿತ್ತು ಎಂದರು.

ಈ ವರ್ಷ 50 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ ಕೊಟ್ಟಿದೆ ಹಣವನ್ನು ಸಹ ಬಿಡುಗಡೆ ಮಾಡುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಜಿ¯್ಲÁ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ರಾಜುಗೌಡಾ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮತ್ತು ಶಿವಾನಂದ ಮುತ್ತಣ್ಣವರ ಇದ್ದರು.

Facebook Comments

Sri Raghav

Admin