ಬಾಹ್ಯಾಕಾಶಕ್ಕೆ ಹಾರಿದ ವಿಶ್ವದ  ಪ್ರಥಮ ಮಾನವರೂಪಿ ರೋಬೋ

ಈ ಸುದ್ದಿಯನ್ನು ಶೇರ್ ಮಾಡಿ

ಮಾಸ್ಕೋ, ಆ.22-ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ರಷ್ಯಾ ಇಂದು ಮತ್ತೊಂದು ಮಹತ್ವದ ಸಾಧನೆ ಮಾಡಿದೆ.ವಿಶ್ವದಲ್ಲಿ ಇದೇ ಪ್ರಪ್ರಥಮ ಬಾರಿಗೆ ರಷ್ಯಾ ಮಾನವ ರೂಪಿ ರೋಬೋವನ್ನು ಯಶಸ್ವಿಯಾಗಿ ಅಂತರಿಕ್ಷಕ್ಕೆ ರವಾನಿಸಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಐಎಸ್‍ಎಸ್)ದಲ್ಲಿ ಖಗೋಳ ಯಾತ್ರಿಗಳಿಗೆ ನೆರವಾಗಲು ಈ ಯಂತ್ರ ಮಾನವನಿಗೆ ತರಬೇತಿ ನೀಡುವ ಉದ್ದೇಶದಿಂದ ಹ್ಯುಮಾನೊಯ್ಡ್ ರೋಬೋವನ್ನು ಕಳುಹಿಸಲಾಗಿದೆ. ಈ ಮಾನವ ರೂಪಿ ಯಂತ್ರ ಮಾನವ ಹೆಸರು ಫೆಡೊರ್.

ಖಜಕೀಸ್ಥಾನದಲ್ಲಿ ಇಂದು ಬೆಳಗ್ಗೆ 6.38ರಲ್ಲಿ ಮಾನವ ರಹಿತ ಸುಯೇಜ್ ಗಗನನೌಕೆ ಫೆಡೊರ್‍ನನ್ನು ಹೊತ್ತು ನಭಕ್ಕೆ ಚಿಮ್ಮಿತು. ಶನಿವಾರ ಈ ಮಾನವ ರೂಪಿ ಯಂತ್ರ ಮಾನವ ನಿಗದಿತ ಸ್ಥಳವನ್ನು ತಲುಪಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸೆಪ್ಟೆಂಬರ್ 17ರವರೆಗೆ ತರಬೇತಿ ಕಾರ್ಯನಿರ್ವಹಿಸಲಿದೆ.

ಸುಯೆಜ್ ಗಗನನೌಕೆ ಪೈಲಟ್ ಆಸನದಲ್ಲಿ ಈ ಯಂತ್ರಮಾನವನನ್ನು ಕೂರಿಸಿ ಅಂತರಿಕ್ಷಕ್ಕೆ ಕಳುಹಿಸಲಾಗಿದೆ. ಬಾಹ್ಯಾಕಾಶದ ಅತ್ಯಂತ ಅಪಾಯಕಾರಿ ಕಾರ್ಯಾಚರಣೆಯನ್ನು ನಿಭಾಯಿಸುವಾಗ ಎದುರಾಗಬಹುದಾದ ಗಂಡಾಂತರಗಳ ಸಂದರ್ಭದಲ್ಲಿ ಈ ಮಾನವ ರೂಪಿ ಯಂತ್ರ ಮಾನವ ಸಹಕಾರಿಯಾಗಲಿದೆ.
ಇಂತಹ ರೋಬೋವನ್ನು ಈವರೆಗೂ ಯಾವುದೇ ದೇಶ ಅಂತರಿಕ್ಷಕ್ಕೆ ರವಾನಿಸಿಲ್ಲ. ಹೀಗಾಗಿ ಇದು ವಿಶ್ವದ ಪ್ರಪ್ರಥಮ ಹ್ಯುಮನೊಯ್ಡ್ ರೋಬೋ ಎನಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ