ಕಿರಿಕಿರಿ ಶಬ್ದ ಮಾಡಿಕೊಂಡು ಓಡಾಡುತ್ತಿದ್ದ 30 ಬೈಕ್‍ಗಳ ಸೈಲೆನ್ಸರ್ ನಾಶಪಡಿಸಿದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

ಹುಣಸೂರು, ಮೇ 16- ನಗರದಲ್ಲಿ ಕರ್ಕಶ ಶಬ್ದ ಮಾಡಿ ಶಬ್ದ ಮಾಲಿನ್ಯಕ್ಕೆ ಕಾರಣವಾಗಿದ್ದ ಹಾಗೂ ಸಮರ್ಪಕ ದಾಖಲಾತಿ ಇಲ್ಲದ ಮೂವತ್ತು ಬೈಕುಗಳನ್ನು ವಶಕ್ಕೆ ಪಡೆದ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಸೈಲೆನ್ಸರ್ ಗಳನ್ನು ನಾಶಪಡಿಸಿದಾರೆ.

ನಗರ ಠಾಣೆ ಆವರಣದಲ್ಲಿ ಕರ್ಕಶ ಶಬ್ದ ಹೊರ ಸೂಸುತ್ತಿದ್ದ ಬೈಕ್‍ಗಳ ಸೈಲೆನ್ಸರ್‍ಗಳನ್ನು ರೋಲರ್ ಬಳಸಿ ನಾಶಪಡಿಸಿದ ನಂತರ ಮಾತನಾಡಿದ ಪಿಎಸ್‍ಐ ಮಹೇಶ್ ದ್ವಿಚಕ್ರ ವಾಹನಗಳ ಸೈಲೆನ್ಸರ್‍ಗಳನ್ನು ಕರ್ಕಶ ಶಬ್ದ ಬರುವಂತೆ ಮಾರ್ಪಡಿಸಿದ್ದಲ್ಲದೇ ಸೂಕ್ತ ದಾಖಲೆಗಳಿಲ್ಲದೆ ನಗರದಲ್ಲಿ ಸಂಚರಿಸುತ್ತಿದ್ದ ಮೂವತ್ತು ದ್ವಿಚಕ್ರ ವಾಹನ ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ನ್ಯಾಯಾಲಯದಲ್ಲಿ ದಂಡ ಕಟ್ಟಿದ ನಂತರ ವಾಹನಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಮುಂದೆ 18 ವರ್ಷದೊಳಗಿನ ಹುಡುಗರು ವಾಹನ ಚಲಾಯಿಸುವುದು ಅಪರಾಧವೆಂದು ಗೊತ್ತಿದ್ದರೂ ಸಹ ಸಮರ್ಪಕ ದಾಖಲಾತಿ, ವಿಮೆ, ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಬೈಕ್ ನೀಡುವ ಫೋಷಕರ ವಿರುದ್ಧವೂ ಇನ್ನು ಮುಂದೆ ಪ್ರಕರಣ ದಾಖಲಿಸಲಾಗುವುದು ಎಂದು ಮಹೇಶ್ ಎಚ್ಚರಿಸಿದ್ದಾರೆ.

ಇತ್ತೀಚೆಗೆ ನಡೆದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಹಿತರಕ್ಷಣಾ ಸಭೆಯಲ್ಲಿ ನಗರದಲ್ಲಿ ಯುವಕರು ಮಹಿಳಾ ಕಾಲೇಜ್ ಬಳಿಯಲ್ಲಿ ಕರ್ಕಶ ಶಬ್ದ ವೀಲಿಂಗ್ ಮಾಡುತ್ತಿರುವ ಬಗ್ಗೆ ದಲಿತ ಮುಖಂಡರು ವೃತ್ತ ನಿರೀಕ್ಷಕ ಶಿವಕುಮಾರ್ ಅವರ ಗಮನಕ್ಕೆ ತಂದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಶಬ್ದ ಮಾಲಿನ್ಯಕ್ಕೆ ಬ್ರೇಕ್ ಹಾಕಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ