ಮೈಸೂರಿನಲ್ಲಿ ಪತಿಯಿಂದ ಪತ್ನಿಗೆ ಮಚ್ಚಿನಿಂದ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಅ.18- ಕೌಟುಂಬಿಕ ಕಲಹದಿಂದ ಪತ್ನಿಗೆ ಪತಿ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ನಗರದ ಸರಸ್ವತಿಪುರಂ ಬಡಾವಣೆಯಲ್ಲಿಇಂದು ಬೆಳಗ್ಗೆ ನಡೆದಿದೆ.ನಾಗರತ್ನ(34) ಹಲ್ಲೆಗೊಳಗಾದ ಗೃಹಿಣಿ. ಇಂದು ಬೆಳಗ್ಗೆ ನಾಗರತ್ನ ಕೆಲಸಕ್ಕೆ ಹೋಗುವಾಗ ಹಿಂದಿನಿಂದ ಪತಿ ಬಂಗಾರು ನಾಯಕ್ ಬಂದು ಮಚ್ಚಿನಲ್ಲಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಹಲ್ಲೆಯಿಂದ ತೀವ್ರ ಗಾಯಗೊಂಡ ಮಹಿಳೆ ಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸಾರ್ವಜನಿಕರು ದಾಖಲಿಸಿದ್ದಾರೆ. ಪತಿ ಬಂಗಾರು ನಾಯಕ್ ಬಾಳೆಹಣ್ಣಿನ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಎರಡು ವರ್ಷದಿಂದಲೂ ಇವರಿಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಎಸಿಪಿ ಪೂರ್ಣಚಂದ್ರ ತೇಜಸ್ವಿ, ಸರಸ್ವತಿಪುರಂ ಠಾಣೆಯ ಇನ್ಸಪೆಕ್ಟರ್ ತಿಮ್ಮರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments