ಪತ್ನಿಯನ್ನು ತವರಿಗೆ ಬಿಟ್ಟು ಕೊರೊನಾ ಗಿಫ್ಟ್ ಕೊಟ್ಟು ಹೋದ ಅಳಿಯ..!

ಈ ಸುದ್ದಿಯನ್ನು ಶೇರ್ ಮಾಡಿ

ಗದಗ, ಜೂ.22- ಕೊರೊನಾ ಸೋಂಕು ತಗುಲಿರುವುದು ಒಂದೊಂದು ರೀತಿಯಲ್ಲಿ ವಿಶೇಷ ವಿಸ್ಮಯಗಳನ್ನು ಸೃಷ್ಟಿಸಿದರೆ, ಮತ್ತೊಂದೆಡೆ ಆತಂಕ, ತಲ್ಲಣಗಳನ್ನು ಉಂಟು ಮಾಡಿದೆ.

ವಿವಿಧ ಕಾರಣಗಳಿಂದ ಕೊರೊನಾ ಸೋಂಕು ವ್ಯಾಕವಾಗಿ ಹರಡುತ್ತಿದೆ. ಪತ್ನಿಯನ್ನು ತವರಿಗೆ ಬಿಟ್ಟು ಬರಲು ಹೋದ ಅಳಿಯ ಮಾವನ ಮನೆಗೆ ಕೊರೊನಾವನ್ನು ಗಿಫ್ಟ್ ಆಗಿ ಕೊಟ್ಟು ಹೋಗಿದ್ದಾರೆ. ಇದರಿಂದ ಗದಗ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಆತಂಕ ಶುರುವಾಗಿದೆ.

ಅಷ್ಟೇ ಅಲ್ಲ ಈ ವ್ಯಕ್ತಿ ವೈದ್ಯರಾಗಿದ್ದು, ಹಲವರಿಗೆ ಚಿಕಿತ್ಸೆಗೆ ಕೂಡ ನೀಡಿದ್ದಾರೆ. ಇವರಿಂದ ಚಿಕಿತ್ಸೆ ಪಡೆದವರೆಲ್ಲಾ ಈಗ ಗಾಬರಿಯಾಗಿದ್ದಾರೆ.
ಗದಗ ತಾಲ್ಲೂಕಿನ ಹರ್ತಿ ಗ್ರಾಮದ ಪ್ರತಿಯೊಬ್ಬರಲ್ಲೂ ಈಗ ಅಳಿಯದ್ದನದ್ದೇ ಚರ್ಚೆ ನಡೆಯುತ್ತಿದೆ.

ಜೂ.5ರಂದು ಹುಬ್ಬಳ್ಳಿಯಿಂದ ಪತ್ನಿಯನ್ನು ಕರೆದುಕೊಂಡು ಮಾವನ ಮನೆಗೆ ಬಂದಿದ್ದರು. ಆಗ ಅವರಲ್ಲಿ ಸೋಂಕಿನ ಲಕ್ಷಣಗಳಿರಲಿಲ್ಲ. ಪತ್ನಿಯನ್ನು ಬಿಟ್ಟು ಜೂ.6ರಂದು ಹುಬ್ಬಳ್ಳಿಗೆ ವಾಪಸ್ ತೆರಳಿದ್ದಾರೆ. ಜೂ.7ರಂದು ಅವರ ಆರೋಗ್ಯದಲ್ಲಿ ಏರುಪೇರಾಗಿದೆ.

ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಕೋವಿಡ್ ಟೆಸ್ಟ್ ಮಾಡಿದಾಗ ಕೊರೊನಾ ಇರುವುದು ದೃಢಪಟ್ಟಿದೆ. ಮಾವನ ಮನೆಯಲ್ಲಿ ಒಂದೆರಡು ದಿನ ಪತ್ನಿಯನ್ನು ಬಿಟ್ಟು ಹೋದರೆ ಆಯ್ತು ಅಂದುಕೊಂಡು ಬಂದವರು ಈಗ ಕೊರೊನಾ ವೈರಸ್ ಗಿಫ್ಟ್ ಕೊಟ್ಟು ಬಂದಿದ್ದಾರೆ. ಹೀಗಾಗಿ ಹರ್ತಿ ಗ್ರಾಮದ ಎರಡು ಪ್ರದೇಶವನ್ನು ಕಂಟೈನ್ಮೆಂಟ್ ಎಂದು ಘೋಷಣೆ ಮಾಡಲಾಗಿದೆ.

Facebook Comments

Sri Raghav

Admin