ಪತ್ನಿಯನ್ನು ಉಸಿರುಗಟ್ಟಿಸಿ ಕೊಂದ ಪತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ, ಜೂ. 16- ತವರಿಗೆ ತೆರಳಿ ಮರಳಿದ್ದ ಪತ್ನಿಯ ಮೇಲೆ ಹಲ್ಲೆ ನಡೆಸಿದ ಪತಿ ಆಕೆಯನ್ನು ಉಸಿರುಗಟ್ಟಿ ಕೊಲೆ ಮಾಡಿರುವ ಘಟನೆ ತಾಲೂಕಿನ ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಗೇರೆ ನಡೆದಿದೆ.

ದುರ್ಗಮ್ಮ (28) ಮೃತದುರ್ದೈವಿ. ಬಂಧಿತನನ್ನು ರಂಗನಾಥ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲತಃ ಆಂಧ್ರದವರಾದ ದುರ್ಗಮ್ಮ ಕಳೆದ 8ವರ್ಷಗಳ ಹಿಂದೆ ಈಶ್ವರಗೇರೆ ಗ್ರಾಮದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ರಂಗನಾಥನನ್ನು ಮದುವೆಯಾಗಿದ್ದರು. ಇವರಿಗೆ ಈಗ ಮಗು ಕೂಡಯಿದೆ.

ಕಳೆದ 15ದಿನಗಳ ಹಿಂದೆ ಕೌಟುಂಬಿಕ ವಿಚಾರವಾಗಿ ಜಗಳ ನಡೆದಿತ್ತು. ಇದರಿಂದ ಕೋಪಗೊಂಡು ದುರ್ಗಮ್ಮ ತವರು ಮನೆಗೆ ತೆರಳಿದ್ದಳು, ಅಲ್ಲಿ ಆಕೆಯ ಪೋಷಕರು ಸಮಾಧಾನ ಪಡಿಸಿ ವಾಪಸ್ ಕಳುಹಿಸಿದ್ದರು. ಅದರಂತೆ ನಿನ್ನೆ ಸಂಜೆ ಆಕೆ ಮನೆಗೆ ಹಿಂದಿರುಗಿದ್ದರು.

ಈ ವೇಳೆ ಮನೆಯಲ್ಲಿದ್ದ ರಂಗನಾಥ ಪತ್ನಿಯನ್ನು ನೋಡಿ ಒಮ್ಮೆಲ್ಲೇ ಆಕೆಯ ಮೇಲೆ ರೇಗಿದ್ದಾನೆ ಈ ನಡುವೆ ದಂಪತಿ ಮಧ್ಯ ಜಗಳ ನಡೆದಿದೆ. ಪರಿಸ್ಥಿತಿ ತಾರಕಕ್ಕೇ ಹೋಗಿ ಪತ್ನಿ ಮೇಲೆ ಹಲ್ಲೆ ನಡೆಸಿ ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ನಂತರ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದಾಗ ಸ್ಥಳೀಯರು ಹಿಡಿದಿದ್ದಾರೆ. ಅಬ್ಬಿನಹೊಳೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin