ಕುಡಿದ ಅಮಲಿನಲ್ಲಿ ಪತ್ನಿಯನ್ನು ಕೊಂದ ಪತಿ..!

ಈ ಸುದ್ದಿಯನ್ನು ಶೇರ್ ಮಾಡಿ

ನೆಲಮಂಗಲ, ಜ.15- ಕುಡಿದ ಅಮಲಿನಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತಮ್ಮೇನಹಳ್ಳಿ ಪಾಳ್ಯದ ನಿವಾಸಿ ಪುಟ್ಟಮ್ಮ (27) ಕೊಲೆಯಾದ ಪತ್ನಿ.

ಮೂಲತಃ ದಂಪತಿ ಹೊಳೆನರಸೀಪುರದವರಾಗಿದ್ದು, ಕಳೆದ ಎರಡು ವರ್ಷಗಳಿಂದ ತಮ್ಮೇನಹಳ್ಳಿಯಲ್ಲಿ ವಾಸವಾಗಿದ್ದಾರೆ.ಪತಿ ಶಶಿಕುಮಾರ್ ಬಾರ್‍ಬೆಂಡರ್ ಕೆಲಸ ಮಾಡುತ್ತಿದ್ದು, ಸೋಮವಾರ ರಾತ್ರಿ ಪತಿ ಶಶಿಕುಮಾರ್ ಕುಡಿದು ಮನೆಗೆ ಬಂದಿದ್ದಾನೆ. ಈ ವೇಳೆ ಪತ್ನಿ ಪುಟ್ಟಮ್ಮ ಹಾಗೂ ಶಶಿಕುಮಾರ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದೆ.

ಜಗಳ ವಿಕೋಪಕ್ಕೆ ತಿರುಗಿ ಮದ್ಯದ ಅಮಲಿನಲ್ಲಿದ್ದ ಪತಿ ಪುಟ್ಟಮ್ಮನಿಗೆ ಕೈಯಿಂದ ಹೊಡೆದಿದ್ದಾನೆ. ಆಕೆ ಕೆಳಗೆ ಕುಸಿದು ಬಿದ್ದಿದ್ದಾಳೆ. ನಂತರ ಆತ ಕೂಡ ಮಲಗಿದ್ದು, ಸಹಜವಾಗಿ ಬೆಳಗ್ಗೆ ಕೆಲಸಕ್ಕೆಂದು ತೆರಳಿದ್ದಾನೆ. ರಾತ್ರಿ ಮನೆಗೆ ಬಂದಾಗ ಪತ್ನಿ ಪುಟ್ಟಮ್ಮ ನೆಲದ ಮೇಲೆಯೇ ಮಲಗಿರುವುದನ್ನು ಕಂಡು ಅನುಮಾನಗೊಂಡು ಅಕ್ಕಪಕ್ಕದ ಮನೆಯವರನ್ನು ಕರೆದಿದ್ದಾನೆ.

ಈ ವೇಳೆ ಪುಟ್ಟಮ್ಮ ಮೃತಪಟ್ಟಿರುವುದು ತಿಳಿದುಬಂದಿದೆ. ಸುದ್ದಿ ತಿಳಿದ ಕೂಡಲೇ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪತಿ ಶಶಿಕುಮಾರ್‍ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin