ಮದುವೆಯಾದ ಎರಡೇ ದಿನಕ್ಕೆ ಪತಿ ಗಾಯಬ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.20- ವಿವಾಹ ನೋಂದಣಿ ಮಾಡಿಸಲು ಮನೆಗೆ ಹೋಗಿ ದಾಖಲಾತಿ ತೆಗೆದುಕೊಂಡು ಬರುವುದಾಗಿ ಹೇಳಿ ಹೋದ ಕಿಶೋರ್‍ಕುಮಾರ್ (23) ಎಂಬಾತ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಕಿಶೋರ್‍ಕುಮಾರ್ ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಸುನೀತಾ ಜೊತೆ ಪೋಷಕರ ವಿರುದ್ಧದ ನಡುವೆಯೂ ಶ್ರಾವಣದುರ್ಗದ ಗಣೇಶ ದೇವಸ್ಥಾನದಲ್ಲಿ ಆ.7ರಂದು ವಿವಾಹವಾಗಿದ್ದರು.

ಆ.9ರಂದು ಬೆಳಗ್ಗೆ ವಿವಾಹ ನೋಂದಣಿ ಮಾಡುವುದಕ್ಕಾಗಿ ದಾಖಲಾತಿಗಳನ್ನು ತೆಗೆದುಕೊಂಡು ಬರುವುದಾಗಿ ಸುನಿತಾರಿಗೆ ಹೇಳಿ ಕಿಶೋರ್‍ಕುಮಾರ್ ಹೋಗಿದ್ದು, ಇದುವರೆಗೂ ವಾಪಸ್ ಬಾರದೆ ಕಾಣೆಯಾಗಿದ್ದಾರೆ. ಪತಿಯನ್ನು ಹುಡುಕಿಕೊಡಿ ಎಂದು ಸುನಿತಾ ಆ.13ರಂದು ರಾಜಗೋಪಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕನ್ನಡ ಮತ್ತು ಹಿಂದಿ ಮಾತನಾಡುವ ಈತನ ತುಟಿಯ ಮೇಲೆ ಹಳೆ ಗಾಯದ ಗುರುತು ಇದೆ. ಈತನ ಬಗ್ಗೆ ಯಾರಿಗಾದರು ಮಾಹಿತಿ ಇದ್ದರೆ ಕೂಡಲೇ ಕಂಟ್ರೋಲ್ ರೂಂಗಾಗಲಿ ಅಥವಾ ರಾಜಗೋಪಾಲನಗರ ಪೊಲೀಸ್ ಠಾಣೆಗಾಗಲಿ ತಿಳಿಸಬೇಕೆಂದು ಮನವಿ ಮಾಡಿದ್ದಾರೆ.

Facebook Comments