ಪತಿಯ ಕೊಲೆಗೆ ಸಾಥ್ ನೀಡಿದ ಪತ್ನಿ ಬಂಧನ, ಪ್ರಿಯಕರನಿಗಾಗಿ ಪೊಲೀಸರ ಹುಡುಕಾಟ

ಈ ಸುದ್ದಿಯನ್ನು ಶೇರ್ ಮಾಡಿ

ಹನೂರು :- ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ತಾಳಬೆಟ್ಟದ ಒಂದನೇ ತಿರುವಿನಲ್ಲಿ ಕಳೆದ ಜೂ.25 ರಂದು ಸಂಜೆ ಪ್ರಾಧಿಕಾರದ ಕಾವೇರಿ ನೀರು ಸರಬರಾಜು ನೌಕರನ ಕೊಲೆ ಪ್ರಕರಣ ಬೇಧಿಸುವಲ್ಲಿ ಮ.ಬೆಟ್ಟದ ಪೊಲೀಸರು ಯಶಸ್ವಿಯಾಗಿದ್ದು ಪತ್ನಿಯನ್ನು ವಶಕ್ಕೆ ಪಡೆದು ಇನ್ನಿಬ್ಬರ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಮೃತ ಮಹದೇವ ಪ್ರಸಾದ್ ಪತ್ನಿ ಅನಿತಾ ಈಕೆಯ ಹಳೆ ಪ್ರಿಯರನ ಪ್ರೇಮ ಕಥೆಯೇ ಕಾರಣ ಎಂದು ತಿಳಿದು ಬಂದಿದೆ. ಹಾಗೂ ಪ್ರೇಮಿ ಬಸವಣ್ಣ ಮತ್ತು ಸ್ನೇಹಿತ ಶರತ್ ಎಂಬುವವರೆ ಕೊಲೆ ಆರೋಪಿಗಳಾಗಿದ್ದು ಪತ್ನಿ ಅನಿತಳನ್ನು ವಶಕ್ಕೆ ಪಡೆದು ಬಸವಣ್ಣ ಮತ್ತು ಶರತ್ ಇಬ್ಬರಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ.

ಮೃತ ಮಹಾದೇವ ಪ್ರಸಾದ್​ನ ಪತ್ನಿ ಅನಿತಾ ಎಂಬಾಕೆ ಮದುವೆಗೆ ಮುನ್ನ ಚಾಮರಾಜ ನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಯುವಕನೋರ್ವನೊಂದಿಗೆ ಪ್ರೇಮಾಂಕುರ ಹೊಂದಿದ್ದು ಅದು ಮದುವೆ ನಂತರವೂ ಮುಂದುವರೆಸಿದ್ದು ಪತಿಯ ಸಾವಿಗೆ ಕಾರಣವಾಗಿದೆ.

ಏನಿದು ಪ್ರಕರಣ :- ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾವೇರಿ ಪಂಪ್ ಹೌಸ್​ನಲ್ಲಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಹಾದೇವ ಪ್ರಸಾದ್ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ತೆಳ್ಳೂರು ಗ್ರಾಮದ ಅನಿತಾ ಎಂಬಾಕೆಯನ್ನು ವಿವಾಹ ಮಾಡಿಕೊಂಡಿದ್ದ. ಆದರೆ ಅನಿತಾ ಅದಾಗಲೇ ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಬಸವಣ್ಣ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ.

ವಿವಾಹದ ಬಳಿಕವೂ ಮುಂದುವರೆದಿದ್ದ ಇವರ ಪ್ರೇಮ ಪುರಾಣ ಪತಿ ಮಹಾದೇವ ಪ್ರಸಾದ್​ಗೆ ತಿಳಿದಿದ್ದರಿಂದ ಕಸಿವಿಸಿಗೊಂಡ ಅನಿತಾ ಪತಿಯನ್ನು ಮುಗಿಸಿ ಬಸವಣ್ಣನೊಂದಿಗೆ ಜೀವನ ಸಾಗಿಸಲು ನಿಶ್ಚಯಿಸಿದ್ದಳು.

ಪತಿಯನ್ನು ತನ್ನೂರಿಗೆ ಬರುವಂತೆ ಹೇಳಿ ಮಹದೇಶ್ವರ ಬೆಟ್ಟದ ತಪ್ಪಲಿನ ತಾಳಬೆಟ್ಟದಲ್ಲಿ ಬೈಕ್ ನಲ್ಲಿ ಬರುತ್ತಿದ್ದ ಪತಿ ಮಹದೇವ ಪ್ರಸಾದ್ ನನ್ನು ಮಾಗ೯ ಮಧ್ಯದಲ್ಲಿಯೆ ಅಡ್ಡ ಗಟ್ಟಿಸಿ ಬೈಕ್ ನಿಲ್ಲಿಸುತ್ತಿದ್ದಂತೆ ಹಿಂಬದಿಯಿಂದ ತಲೆ ಭಾಗಕ್ಕೆ ಹೊಡೆದು ಪ್ರಿಯಕರನಿಂದ ಕೊಲೆ ಮಾಡಿಸಲು ಸಂಚು ರೂಪಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಕೊಲೆ ಮಾಡಿದ ಪ್ರಿಯಕರ ಬಸವಣ್ಣನಿಗೆ ಸ್ನೇಹಿತ ಶರತ್ ಎಂಬಾತ ಸಾಥ್ ನೀಡಿರುವುದಾಗಿ ತಿಳಿದು ಬಂದಿದೆ. ಪತ್ನಿ ಅನಿತಾ ಈಗ ಮ.ಬೆಟ್ಟ ಪೊಲೀಸರ ವಶದಲ್ಲಿದ್ದು ಬಸವಣ್ಣ ಹಾಗೂ ಶರತ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Facebook Comments