ಪತ್ನಿ ಸಾವಿನಿಂದ ಮನನೊಂದು ಪತಿ ಆತ್ಮಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಜ.20- ಪತ್ನಿ ಸಾವಿನಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರವಲಯದ ರಾಜಘಟ್ಟದಲ್ಲಿ ನಡೆದಿದೆ. ಲಕ್ಷ್ಮೇಗೌಡ (55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದ ಒಂದು ವಾರದ ಹಿಂದೆಯಷ್ಟೆ ಕ್ಯಾನ್ಸರ್‍ನಿಂದ ಪತ್ನಿ ಲೀಲಾ ಸಾವನ್ನಪ್ಪಿದ್ದರು.

ಹಲವು ವರ್ಷಗಳಿಂದ ದಂಪತಿ ಹೊಂದಿಕೊಂಡು ಚೆನ್ನಾಗಿ ಸಂಸಾರ ಮಾಡುತ್ತಿದ್ದರು. ಪತ್ನಿ ಅಗಲಿಕೆಯ ದುಃಖ ತಾಳಲಾರದೆ ಮನನೊಂದು ಲಕ್ಷ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹಾಸನ ಬಡಾವಣೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin