ಪತಿ ನದಿಗೆ ತಳ್ಳಿದರೂ ಬದುಕಿ ಬಂದು ಶಾಕ್ ಕೊಟ್ಟ ಪತ್ನಿ…!

ಈ ಸುದ್ದಿಯನ್ನು ಶೇರ್ ಮಾಡಿ

Haveri--01

ದಾವಣಗೆರೆ, ಜೂ.23-ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ತುಂಗಭದ್ರಾ ನದಿಗೆ ಹೆಂಡತಿಯನ್ನು ತಳ್ಳಿ ಕೊಲೆಗೆ ಪತಿರಾಯ ಯತ್ನಿಸಿದ್ದರೂ ಪವಾಡ ಸದೃಶ್ಯ ರೀತಿಯಲ್ಲಿ ರಾತ್ರಿಯಿಡೀ ನೀರಿನಲ್ಲೇ ಕಾಲ ಕಳೆದ ಪತ್ನಿ ಬದುಕಿಬಂದ ಘಟನೆ ಹರಿಹರ ತಾಲ್ಲೂಕಿನ ನಂದಿಗುಡಿ ಸೇತುವೆ ಬಳಿ ನಡೆದಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಚಿಕ್ಕಕಬ್ಬಾರ ಗ್ರಾಮದ ರೂಪೇಶ್‍ಗೌಡ ಪತ್ನಿಯ ಕೊಲೆಗೆ ಯತ್ನಿಸಿದ ಭೂಪ.

ರಟ್ಟಿಹಳ್ಳಿ ತಾಲ್ಲೂಕಿನ ಗಲಗಿನಕಟ್ಟಿ ಗ್ರಾಮದ ಅರುಣ್‍ಕುಮಾರಿ ಅವರನ್ನು ರೂಪೇಶ್‍ಗೌಡ ಕಳೆದ ವರ್ಷ ವಿವಾಹವಾಗಿದ್ದು, ಪ್ರಾರಂಭದಲ್ಲಿ ಇವರ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು ಎನ್ನಲಾಗಿದೆ.   ಆದರೆ, ಇತ್ತೀಚೆಗೆ ಇವರ ದಾಂಪತ್ಯ ಜೀವನದಲ್ಲಿ ಕಲಹಗಳು ನಡೆಯುತ್ತಿದ್ದು, ಪತ್ನಿಯನ್ನು ಕೊಲೆ ಮಾಡುವ ಕೆಟ್ಟ ಆಲೋಚನೆಗೆ ಮುಂದಾದ ರೂಪೇಶ್‍ಗೌಡ, ಉಕ್ಕಡಗಾತ್ರಿ ದೇವಸ್ಥಾನಕ್ಕೆ ಪತ್ನಿಯನ್ನು ಕರೆದುಕೊಂಡು ಹೋಗಿ ತುಂಗಭದ್ರಾ ನದಿಗೆ ತಳ್ಳಿ ಮನೆಗೆ ವಾಪಸ್ ಬಂದಿದ್ದಾನೆ.

ಸುಮಾರು ಒಂದು ಕಿ.ಮೀ. ದೂರ ನೀರಿನಲ್ಲಿ ಅರುಣ್‍ಕುಮಾರ್ ಕೊಚ್ಚಿ ಹೋಗಿ ನೀರಿನ ಮಧ್ಯೆ ಇದ್ದ ಬಂಡೆ ಸಹಾಯದಿಂದ ರಾತ್ರಿಯಿಡೀ ಕಾಲ ಕಳೆದಿದ್ದಾರೆ. ಇಂದು ಬೆಳಗ್ಗೆ ಪತ್ತೆಪುರ ಗ್ರಾಮಸ್ಥರು ನೀರಿನ ಮಧ್ಯೆ ಇದ್ದ ಮಹಿಳೆಯನ್ನು ನೋಡಿ ರಕ್ಷಿಸಿ ರಟ್ಟಿಹಳ್ಳಿ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡು ಪತಿ ರೂಪೇಶ್‍ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

Facebook Comments

Sri Raghav

Admin