ತೆಲಂಗಾಣ ಸಿಎಂ ಆಸ್ತಿ 22 ಕೋಟಿ ರೂ. ಆದರೆ ಸ್ವಂತ ಕಾರು ಇಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

telangana c mಹೈದರಾಬಾದ್, ನ.15 (ಪಿಟಿಐ)-ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಆಸ್ತಿ ಕುರಿತು ಪ್ರಯಾಣ ಪತ್ರ ಸಲ್ಲಿಸಿದ್ದಾರೆ. ಇವರು 22.61 ಕೋಟಿ ರೂ.ಗಳನ್ನು ಹೊಂದಿದ್ದಾರೆ. 16 ಎಕರೆ ಕೃಷಿ ಭೂಮಿ ಒಡೆಯರಾಗಿರುವ ಕೆಸಿಆರ್ ಬಳಿ ಸ್ವಂತ ಕಾರು ಇಲ್ಲ. ಗಜಾಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರದೊಂದಿಗೆ ಸ್ವಯಂಘೋಷಿತ ಆಸ್ತಿ ವಿವರಗಳನ್ನು ರಾವ್ ಸಲ್ಲಿಸಿದ್ದಾರೆ.

ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‍ಎಸ್) ಪಕ್ಷ ಚಿಹ್ನೆ ಕಾರು. ಕೆಸಿಆರ್ ಪಕ್ಷಚ ಪರಮೋಚ್ಚ ನಾಯಕರು ಮತ್ತು ಮುಖ್ಯಮಂತ್ರಿಯಾಗಿದ್ದರೂ ಸ್ವಂತ ಕಾರು ಹೊಂದಿಲ್ಲ ಎಂಬ ಸಂಗತಿಯನ್ನು ಅಫಿಡಾವಿಟ್‍ನಲ್ಲಿ ತಿಳಿಸಿದ್ಧಾರೆ. ರಾವ್ ಅವರ ಚರಾಸ್ತಿ ಮತ್ತು ಸ್ಥಿರಾಸ್ತಿಗಳ ಒಟ್ಟು ಮೌಲ್ಯ 22.61 ಕೋಟಿ ರೂ.ಗಳು 2014ರಲ್ಲಿ ಇವರ ಒಟ್ಟು ಆಸ್ತಿ 15.85 ಕೋಟಿ ರೂ.ಗಳಾಗಿತ್ತು. ನಾಲ್ಕು ವರ್ಷಗಳಲ್ಲಿ 5.5 ಕೋಟಿ ರೂ. ಆಸ್ತಿ ವೃದ್ಧಿಯಾಗಿದೆ.

ಅಂತೆಯೇ ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟ ನಿಮಿತ್ತ ಅವರು ನಡೆಸಿದ್ದ ಪ್ರತಿಭಟನೆಗಳಿಂದಾಗಿ ಕೆಸಿಆರ್ ಮೇಲೆ ಒಟ್ಟು 64 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆಯಂತೆ. ಇಂದೀಗ ಆ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.

Facebook Comments