Thursday, April 18, 2024
Homeರಾಷ್ಟ್ರೀಯರಾಮನ ನೈವೇದ್ಯಕ್ಕೆ 1265 ಕೆಜಿ ತೂಕದ ಲಡ್ಡು ತಯಾರಿಸಿದ ರೆಡ್ಡಿ

ರಾಮನ ನೈವೇದ್ಯಕ್ಕೆ 1265 ಕೆಜಿ ತೂಕದ ಲಡ್ಡು ತಯಾರಿಸಿದ ರೆಡ್ಡಿ

ಹೈದರಾಬಾದ್,ಜ.17- ಇಲ್ಲಿನ ನಾಗಭೂಷಣ ರೆಡ್ಡಿ ಎಂಬ ವ್ಯಕ್ತಿಯೊಬ್ಬರು ಅಯೋಧ್ಯೆ ರಾಮಮಂದಿರಕ್ಕಾಗಿ 1,265 ಕೆಜಿ ತೂಕದ ಲಡ್ಡು ತಯಾರಿಸಿ ದೇವಸ್ಥಾನದಲ್ಲಿ ನೈವೇದ್ಯವಾಗಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ರೆಡ್ಡಿ ಅವರು ತಯಾರಿಸಿರುವ ಲಡ್ಡುವನ್ನು ಇಂದು ಹೈದರಾಬಾದ್‍ನಿಂದ ಅಯೋಧ್ಯೆಗೆ ತೆಗೆದುಕೊಂಡು ಹೋಗಲಾಗುವುದು ಎಂದು ತಿಳಿದುಬಂದಿದೆ.

ಲಡ್ಡುವನ್ನು ರೆಫ್ರಿಜರೇಟೆಡ್ ಗಾಜಿನ ಪೆಟ್ಟಿಗೆಯಲ್ಲಿ ಒಯ್ಯಲಾಗುತ್ತದೆ. ಈ ಲಡ್ಡು ತಯಾರಿಸಲು ಸುಮಾರು 30 ಜನರು 24 ಗಂಟೆಗಳ ಕಾಲ ನಿರಂತರವಾಗಿ ಶ್ರಮಿಸಿದ್ದಾರೆ ಎಂದು ನಾಗಭೂಷಣರೆಡ್ಡಿ ತಿಳಿಸಿದರು. 2000ನೇ ಇಸವಿಯಿಂದ ನಾನು ಶ್ರೀ ರಾಮ್ ಕ್ಯಾಟರಿಂಗ್ ಎಂಬ ಕೇಟರಿಂಗ್ ಸೇವೆಯನ್ನು ಹೊಂದಿದ್ದೇನೆ. ರಾಮ ಜನ್ಮಭೂಮಿ ದೇವಸ್ಥಾನದ ಭೂಮಿ ಪೂಜೆ ನಡೆಯುವಾಗ, ಶ್ರೀರಾಮನಿಗೆ ಏನು ನೈವೇದ್ಯವನ್ನು ನೀಡಬಹುದು ಎಂದು ನಾವು ಯೋಚಿಸಿದೆವು. ನಂತರ, ನಾವು ಒಂದು ಉಪಾಯವನ್ನು ಮಾಡಿದ್ದೇವೆ. ಭೂಮಿ ಪೂಜೆಯ ದಿನದಿಂದ ದೇವಸ್ಥಾನ ತೆರೆಯುವ ದಿನದವರೆಗೆ ಪ್ರತಿ ದಿನ 1 ಕೆಜಿ ಲಡ್ಡು ನೀಡುತ್ತೇವೆ ಎಂದು ನಾಗಭೂಷಣ ರೆಡ್ಡಿ ತಿಳಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಮತ್ತೊಂದು ಹುಲಿ ಸಾವು

ಮಂದಿರಕ್ಕಾಗಿ 1,265 ಕೆ.ಜಿ ತೂಕದ ಈ ಲಡ್ಡುವನ್ನು ನಾವು ಸಿದ್ಧಪಡಿಸಿದ್ದೇವೆ. ನಾವು ಈ ಲಡ್ಡುವನ್ನು ಹೈದರಾಬಾದ್‍ನಿಂದ ಅಯೋಧ್ಯೆಗೆ ರೆಫ್ರಿಜರೇಟೆಡ್ ಬಾಕ್ಸ್‍ನಲ್ಲಿ ಯಾತ್ರೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ನಾವು ಇಂದು ಹೈದರಾಬಾದ್‍ನಿಂದ ಪ್ರಯಾಣವನ್ನು ಪ್ರಾರಂಭಿಸುತ್ತೇವೆ ಮತ್ತು ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಲಡ್ಡುವನ್ನು ತಯಾರಿಸಿದ ಸ್ವೀಟ್ ಮಾಸ್ಟರ್ ದುಶಾಸನ್ ಅವರು ನನಗೆ ತುಂಬಾ ಸಂತೋಷವಾಗಿದೆ, ನಾನು ಇದೇ ಮೊದಲ ಬಾರಿಗೆ ಇಂತಹ ದೊಡ್ಡ ಕೆಲಸವನ್ನು ಮಾಡಿದ್ದೇನೆ. ನಾವು ತುಂಬಾ ಕಷ್ಟಪಟ್ಟು ಇದನ್ನು ಮಾಡಿದ್ದೇವೆ. ನಾವು ಈ ಲಡ್ಡುವನ್ನು ತಯಾರಿಸಿದ್ದೇವೆ ಎಂದು ವಿವರಿಸಿದರು.

RELATED ARTICLES

Latest News