ಹುಂಡೈ ಗ್ರ್ಯಾಂಟ್ ನಯಿನ್ ಮಾರುಕಟ್ಟಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.11-ಹುಂಡೈ ಮೋಟಾರ್ಸ್ ಇಂಡಿಯಾ ಕಂಪನಿ ಬಹುನಿರೀಕ್ಷೆಯ ದಿ ಗ್ರಾಂಡ್ ಐ 10 ನಯಿನ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಭಾರತದ ಪ್ರಕೃತಿಯಿಂದ ಪ್ರೇರಿತನಾಗಿ ವಿನ್ಯಾಸಗೊಳಿಸಿರುವ ಅತ್ಯಾಕರ್ಷಕ ಕಾರು ಇದಾಗಿದೆ ಎಂದು ಕಂಪನಿಯ ಎಂಡಿ ಹಾಗೂ ಸಿಇಒ ಎಸ್.ಎಸ್.ಕಿಮ್ ಹೇಳಿದರು.

ಕಳೆದ 21 ವರ್ಷಗಳಿಂದ ಕಟ್ಟಿಂಗ್ ಹೆಡ್ಸ್ ತಂತ್ರಜ್ಞಾನವನ್ನು ನೀಡುವ ಮೂಲಕ ವಿಶ್ವದರ್ಜೆಯ ಹುಂಡೈ ಮೋಟಾರ್ಸ್, ಭಾರತೀಯ ಆಟೋ ಮೊಬೈಲ್‍ನಲ್ಲಿ ಮೈಲುಗಲ್ಲು ಸಾಧಿಸಿದೆ.

ಗ್ರಾಹಕರಿಗೆ ಈ ಕಾರು ಗರಿಷ್ಠ ಮಟ್ಟದ ತಂತ್ರಜ್ಞಾನದ ಅನುಭವ ನೀಡಲಿದೆ. ಈಗ ಕೇವಲ 11 ಸಾವಿರದಿಂದ ಬುಕಿಂಗ್ ಆರಂಭವಾಗಿದೆ ಎಂದು ಘೋಷಿಸಿದರು.

Facebook Comments