ಗಡಿ ಉದ್ವಿಗ್ನತೆ, ಲಡಾಕ್ ಗೆ ವಾಯು ಪಡೆ ಮುಖ್ಯಸ್ಥರು ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.16- ಭಾರತ ಮತ್ತು ಚೀನಾ ಗಡಿ ಭಾಗದಲ್ಲಿ ಉಂಟಾಗುತ್ತಿರುವ ಉದ್ವಿಗ್ನತೆ ಹಿನ್ನೆಲೆಯಲ್ಲಿ ಹೆಚ್ಚುವರಿ ಸಿಬ್ಬಂದಿಗಳ ನಿಯೋಜನೆ ಹಾಗೂ ಪೂರ್ವ ತಯಾರಿಗಳ ಪರಿಶೀಲನೆಗೆ ಭಾರತೀಯ ವಾಯು ಪಡೆಯ ಮುಖ್ಯಸ್ಥ ವಿ.ಆರ್.ಚೌದರಿ ಲಡಾಕ್ಗೆ ಭೇಟಿ ನೀಡಿದ್ದಾರೆ.

ಚೀನಾ ಮತ್ತು ಭಾರತದ ನಡುವೆ ಇತ್ತೀಚೆಗೆ ನಡೆದ 13ನೇ ಸುತ್ತಿನ ಕಮಾಂಡರ್ಗಳ ಮಟ್ಟದ ಮಾತುಕತೆಯಲ್ಲಿ ಗಡಿಯಲ್ಲಿ ಶಿಷ್ಠಾಚಾರ ಪಾಲನೆಗೆ ಭಾರತ ಸಲಹೆ ನೀಡಿತ್ತು. ಆದರೆ ಚೀನಾ ಅದನ್ನು ತಳ್ಳಿ ಹಾಕಿದೆ.

ಬದಲಾಗಿ ಅರುಣಾಚಲ ಪ್ರದೇಶಕ್ಕೆ ಭಾರತದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಭೇಟಿಗೆ ಚೀನಾ ಆಕ್ಷೇಪ ವ್ಯಕ್ತ ಪಡಿಸಿತ್ತು. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಪ್ರತಿಪಾದಿಸಿದೆ. ಗಡಿ ವಿವಾದಗಳಲ್ಲಿ ಎರಡು ದೇಶಗಳ ನಡುವೆ ಒಮ್ಮತ ಮೂಡಿಲ್ಲ.

ಅತ್ತ ಚೀನಾ ಗಡಿಯಲ್ಲಿ ತನ್ನ ಸೇನಾ ಜಮಾವಣೆಯನ್ನು ಹೆಚ್ಚಿಸಿದೆ. ಅದಕ್ಕೆ ಪ್ರತಿಯಾಗಿ ಭಾರತ ಕೂಡ ಅತ್ಯಾಧುನಿಕ ಶಸ್ತ್ರಾಸ್ತ್ರಾಗಳು ಹಾಗೂ ಹೆಚ್ಚಿನ ಯೋಧರನ್ನು ಜಮಾವಣೆ ಮಾಡುತ್ತಿದೆ.

ಒಂದು ವೇಳೆ ಪರಿಸ್ಥಿತಿ ಕೈ ಮೀರಿದರೆ ವಾಯು ಸೇನೆಯ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ವಿ.ಆರ್.ಚೌದರಿ ಇಂದು ಬೆಳಗ್ಗೆ ಲೇಹ್ನ ವಿಮಾನನಿಲ್ದಾಣಕ್ಕೆ ಆಗಮಿಸಿದ್ದಾರೆ. ಲಡಾಕ್ನ ಪಶ್ಚಿಮ ವಲಯಕ್ಕೆ ಭೇಟಿ ನೀಡಲಿದ್ದು, ಗಡಿ ನಿಯಂತ್ರಣ ರೇಖೆಯ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.

Facebook Comments

Sri Raghav

Admin