ರಷ್ಯಾ ಜೊತೆ ಭಾರತ ಜೆಟ್‍ ಡೀಲ್, ಪುಟಿನ್ ಭೇಟಿ ವೇಳೆ ಒಪ್ಪಂದಕ್ಕೆ ಸಹಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.8- ಭಾರತೀಯ ವಾಯು ಪಡೆಗೆ (ಐಎಎಫ್) ರಷ್ಯಾದ ಅತ್ಯುತ್ತಮ ಸಮರ ಜೆಟ್‍ಗಳನ್ನು ಖರೀದಿಸಲು ಚರ್ಚೆ ನಡೆದಿದೆ. ಈ ವರ್ಷದ ಕೊನೆಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ 33 ಜೆಟ್‍ಗಳನ್ನು ಖರೀದಿಸುವ ಒಪ್ಪಂದಕ್ಕೆ ಅಂತಿಮ ಸಹಿ ಬೀಳಲಿದೆ ಎಂದು ಹೇಳಲಾಗಿದೆ.

ಭಾರತ ವಾಯು ಪಡೆಯಲ್ಲಿ ರಷ್ಯಾದ ಜೆಟ್‍ಗಳು 1972ರ ಪಾಕ್ ಪರ ಯುದ್ಧ , 2000ದಲ್ಲಿ ಕಾರ್ಗಿಲ್ ಯುದ್ಧ ಸೇರಿದಂತೆ ಹಲವು ತುರ್ತು ಸ್ಥಿತಿಯಲ್ಲಿ ದೇಶದ ಗಡಿ ರಕ್ಷಣೆಯಲ್ಲಿ ಅತ್ಯುತ್ತಮವಾದ ಕಾರ್ಯ ನಡೆಸಿದ್ದವು.ಭಾರತ ಮತ್ತು ರಷ್ಯಾ ನಡುವೆ ಸ್ನೇಹ ಸಂಬಂಧದಲ್ಲಿ ರಕ್ಷಣಾ ವಲಯದಲ್ಲೂ ಸಾಕಷ್ಟು ಶಸ್ತ್ರಾಸ್ತ್ರಗಳು ಕೂಡ ಪಡೆಯಲಾಗಿದೆ. ಇದಕ್ಕೆ ಉದಾಹರಣೆಯಂತೆ ಇಡೀ ವಿಶ್ವದಲ್ಲಿಯೇ ಅತ್ಯುತ್ತಮ ವೇಗ ಹಾಗೂ ಶಕ್ತಿಶಾಲಿ ಬ್ರಹ್ಮೋಸ್ ಕ್ಷಿಪಣಿಯನ್ನು ಈಗಾಗಲೇ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ.

ಸ್ನೇಹ ಸಂಬಂಧ ಮತ್ತಷ್ಟು ಮುಂದುವರೆದು ಐಎಎಫ್‍ಗೆ ಸದ್ಯ ಅಗತ್ಯವಿರುವ 33 ಸಮರ ವಿಮಾನಗಳ ಪೈಕಿ ರಷ್ಯಾದ ಸುಖೋಯ್ -ಸು30 ಎಂಕೆಐ ಖರೀದಿಸಲು ಉತ್ಸುಕತೆ ತೋರಲಾಗಿದೆ. ಈ ಸಂಬಂಧ ವಿದೇಶಾಂಗ ಸಚಿವ ಜೈಶಂಕರ್ ಅವರು ರಷ್ಯಾದ ವಿದೇಶಾಂಗ ಸಚಿವ ಸರ್ಜಿ ಲರಾವ್ ಅವರೊಂದಿಗೆ ಅಂತಿಮಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವರ್ಷದ ಅಂತ್ಯದಲ್ಲಿ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ನಡೆಸಲಿದ್ದು, ಈ ವೇಳೆ ಈ ಸಮರ ವಿಮಾನಗಳ ಖರೀದಿ ಬಗ್ಗೆ ಚರ್ಚೆ ನಡೆದು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.ವಿಶೇಷವೆಂದರೆ ಬೆಂಗಳೂರಿನ ಎಚ್‍ಎಎಲ್‍ನಲ್ಲಿ 12 ಸುಖೋಯ್ -ಸು30ಎಂಕೆಐ ತಯಾರಿಸಲು ನಿರ್ಧರಿಸಿದೆ.

ನಾಸಿಕ್‍ನಲ್ಲಿರುವ ಕಾರ್ಖಾನೆಯಲ್ಲಿ ಈಗಾಗಲೇ ಎರಡು ಸುಖೋಯ್ ಯುದ್ಧ ವಿಮಾನಗಳು ಸಿದ್ಧಗೊಳ್ಳುತ್ತಿದ್ದು, ಸದ್ಯದಲ್ಲಿಯೇ ಅದು ಐಎಎಫ್‍ಗೆ ಸೇರಲಿದೆ ಎಂದು ಹೇಳಲಾಗುತ್ತಿದೆ.ಐಎಎಫ್‍ನ ಇಂಜಿನಿಯರ್‍ಗಳು ಈಗಾಗಲೇ ಮಿಗ್ ಕಾಂಪ್ಲೆಕ್ಸ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಇದು ನಮಗೆ ಅತ್ಯಂತ ಉಪಯುಕ್ತ ಜೆಟ್ ಆಗಲಿದೆ ಎಂದು ಹೇಳಿದ್ದಾರೆ.

ರಷ್ಯಾದ ರಕ್ಷಣಾ ಇಲಾಖೆಯು ಮಿಗ್ 29ಗೆ ಸಂಬಂಸಿದಂತೆ ಇಂಜಿನ್‍ಗಳು, ರೆಡಾರ್‍ಗಳು ಸೇರಿದಂತೆ ಹಲವು ಉಪಕರಣಗಳನ್ನು ನೀಡಲಿದ್ದು , ಪ್ರಸ್ತುತ ಭಾರತದಲ್ಲಿರುವ ಮಿಗ್-29 ಅನ್ನು ಮೇಲ್ದರ್ಜೆಗೇರಿಸಲು ಸಹಾಯಕವಾಗಲಿದೆ.

Facebook Comments

Sri Raghav

Admin