ಪ್ರೊಬೆಷನರಿ ತಹಸೀಲ್ದಾರ್‌ಗಳ ಮೇಲೆ ಐಎಎಸ್ ಅಕಾರಿಗಳ ದಬ್ಬಾಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.11- ಕೋವಿಡ್ ಕೇರ್ ಸೆಂಟರ್‍ನಲ್ಲಿ ಐಎಎಸ್ ಮತ್ತು ಪ್ರೊಬೆಷನರಿ ಕೆಎಎಸ್ ಅಕಾರಿಗಳ ನಡುವೆ ಜಗಳ ಶುರುವಾಗಿದೆ. ಕೇರ್ ಸೆಂಟರ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂಟು ಮಂದಿ ಪ್ರೊಬೆಷನರಿ ತಹಸೀಲ್ದಾರ್‍ಗಳಿಗೆ ಐಎಎಸ್ ಅಧಿಕಾರಿ ರಾಜೇಂದ್ರಕುಮಾರ್ ಕಟಾರಿಯಾ ಅವರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಐಎಎಸ್ ಅಧಿಕಾರಿಯ ಕಿರುಕುಳ ಕುರಿತಂತೆ ಪ್ರೊಬೆಷನರಿ ತಹಸೀಲ್ದಾರ್‍ಗಳಾದ ರಶ್ಮಿ, ಶೃತಿ, ಯೋಗೇಶ್, ಬಸವರಾಜ್, ಸುರೇಶ್ ಮತ್ತು ಗುರುರಾಜ್ ಎಂಬುವವರು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕೋವಿಡ್ ಕೇರ್ ಸೆಂಟರ್ ಟಾಸ್ಕ್‍ ಫೋರ್ಸ್ ಲೀಡರ್ ಆಗಿರುವ ಕಟಾರಿಯಾ ಅವರು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ನಾವು ಕೇರ್ ಸೆಂಟರ್‍ನಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದರೂ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮಹಿಳಾ ಅಧಿಕಾರಿಗಳ ಜತೆ ಅನುಚಿತವಾಗಿ ವರ್ತಿಸುವುದಲ್ಲದೆ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತಿದೆ. ಕಟಾರಿಯಾ ಅವರು ನಿಮ್ಮ ಮೇಲೆ ಎಫ್‍ಐಆರ್ ಹಾಕಿಸುತ್ತೇನೆ, ಸಸ್ಪೆಂಡ್ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ.

ನಾವು ಕರ್ತವ್ಯದಲ್ಲಿದ್ದಾಗಲೂ ಪದೇ ಪದೇ ಕೆಲಸ ಮಾಡುತ್ತಿರುವ ಸೆಲಿ ಕಳುಹಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ನಾವು ಆತ್ಮಸ್ಥೈರ್ಯ ಕಳೆದುಕೊಂಡಿದ್ದೇವೆ.

ಕೊರೊನಾ ಸೋಂಕಿತರ ಆರೈಕೆ ಮಾಡಲು ನಮಗೆ ಅವಕಾಶ ಮಾಡಿಕೊಡುವಂತೆ ಪ್ರೊಬೆಷನರಿ ತಹಸೀಲ್ದಾರ್‍ಗಳು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

Facebook Comments

Sri Raghav

Admin