ರೋಹಿತ್ ವರ್ಷದ ಐಸಿಸಿ ಕ್ರಿಕೆಟಿಗ, ಕೊಹ್ಲಿಗೆ ಕ್ರಿಕೆಟ್ ಸ್ಫೂರ್ತಿ ಗೌರವ

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ,ಜ.15- ಏಕದಿನ ಕ್ರಿಕೆಟ್‍ನಲ್ಲಿ ಎರಡು ದ್ವಿಶತಕ ಬಾರಿಸಿ ವಿಶ್ವದ ಗಮನ ಸೆಳೆದಿರುವ ಭಾರತ ತಂಡದ ಸ್ಫೋಟಕ ಆಟಗಾರ, ಉಪನಾಯಕ ರೋಹಿತ್‍ಶರ್ಮಾಗೆ ವರ್ಷದ ಆಟಗಾರ ಎಂಬ ಗೌರವ ಒಲಿದು ಬಂದಿದೆ.

ಐಸಿಸಿ ಪ್ರಕಟಿಸಿರುವ ವರ್ಷದ ಪ್ರಶಸ್ತಿ ಪಟ್ಟಿಯಲ್ಲಿ ರೋಹಿತ್ ವರ್ಷದ ಕ್ರಿಕೆಟಿಗನಾದರೆ, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಕ್ರಿಕೆಟ್ ಸ್ಫೂರ್ತಿ ಪ್ರಶಸ್ತಿ ಒಲಿದಿದೆ, ಇಂಗ್ಲೆಂಡ್ ವಿಶ್ವ ಚಾಂಪಿಯನ್ಸ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಬೆನ್‍ಸ್ಟ್ರೋಕ್ಸ್‍ಗೆ ಸರ್ ಗ್ರಾಫೀಲ್ಡ್ ಪ್ರಶಸ್ತಿ ಲಭಿಸಿದೆ.

ಐಪಿಎಲ್‍ನಲ್ಲಿ ಬೃಹತ್ ಮೊತ್ತಕ್ಕೆ ಬಿಕರಿಯಾಗಿರುವ ಆಸ್ಟ್ರೇಲಿಯಾದ ಪ್ಯಾಟ್ ಕುಮಿನ್ಸ್ (12 ಟೆಸ್ಟ್ , 59 ವಿಕೆಟ್)ವರ್ಷದ ಶ್ರೇಷ್ಠ ಟೆಸ್ಟ್ ಬೌಲರ್ ಆಗಿ ಹೊರಹೊಮ್ಮಿದ್ದರೆ, ನಾಗ್ಪುರದಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್ ಕಬಳಿಸಿದ ಭಾರತದ ಯುವ ಪ್ರತಿಭೆ ದೀಪಕ್ ಚಹರ್ ಟ್ವೆಂಟಿ-20 ಕ್ರಿಕೆಟ್‍ನ ಯಶಸ್ವಿ ಬೌಲರ್ ಆಗಿ ಗುರುತಿಸಿಕೊಂಡಿದ್ದರೆ, ಆಸ್ಟ್ರೇಲಿಯಾದ ಯುವ ಬ್ಯಾಟ್ಸ್‍ಮನ್ ಮಾನ್ರ್ಯೂಸ್ ಲಾಬುಸ್‍ಚಾಂಗ್‍ನೆ ಯುವ ಪ್ರತಿಭೆ, ಸ್ಕಾಟ್‍ಲ್ಯಾಂಡ್‍ನ ಕೇಲ್ ಕೊಟ್ಚೇರ್ ಅಸೋಸಿಯೇಟ್ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ.

ರೋಹಿತ್ ಶರ್ಮಾ ವಿಶ್ವಕಪ್‍ನಲ್ಲಿ 9 ಪಂದ್ಯಗಳಿಂದ 648 ರನ್‍ಗಳನ್ನು ಬಾರಿಸುವುದರ ಜೊತೆಗೆ ಒಂದೇ ವಿಶ್ವಕಪ್‍ನಲ್ಲಿ 5 ಶತಕ ಗಳಿಸಿದ ಬ್ಯಾಟ್ಸ್‍ಮನ್ ಎಂಬ ಕೀರ್ತಿಗೆ ಭಾಜನರಾಗಿದ್ದರು. 2019ರಲ್ಲಿ ರೋಹಿತ್ ಆಡಿದ 28 ಏಕದಿನ ಪಂದ್ಯಗಳಿಂದ 1409 ರನ್‍ಗಳನ್ನು ಗಳಿಸಿದ್ದಾರೆ.ಇಂಗ್ಲೆಂಡ್ ದೇಶದ ಅಂಪೈರ್ ರಿಚರ್ಡ್ ಇಲ್ಲಿಂಗ್‍ವರ್ತ್‍ಗೆ ಡೇವಿಡ್ ಶೇಫರ್ಡ್ ಟ್ರೋಫಿಯು ಲಭಿಸಿದೆ.

# ರೋಹಿತ್- ಕೊಹ್ಲಿ ಸಂತಸ:
ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿರುವುದು ನನಗೆ ತುಂಬಾ ಸಂತಸ ವಾಗಿದೆ. 2019 ವರ್ಷ ನನ್ನ ಅದೃಷ್ಟದ ವರ್ಷವಾಗಿತ್ತು, ತಂಡಕ್ಕೆ ಹಲವು ಜಯವನ್ನು ತಂದುಕೊಟ್ಟಿದ್ದೇನೆ, ಅದೇ ರೀತಿ 2020ರಲ್ಲೂ ತನ್ನ ಬ್ಯಾಟಿಂಗ್ ವೈಭವವನ್ನು ಮೆರೆಯುತ್ತೇನೆ ಎಂದು ರೋಹಿತ್ ಶರ್ಮಾ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ನನ್ನನ್ನು ಕ್ರೀಡಾ ಸ್ಫೂರ್ತಿ ಪ್ರಶಸ್ತಿಗೆ ಆಯ್ಕೆ ಮಾಡಿರುವ ವಿಷಯವನ್ನು ಕೇಳಿ ಚಕಿತನಾದೆ, ಇದು ನಾನು ಕ್ರೀಡಸೇವೆಗೆ ಸಂದ ಗೌರವವಾಗಿದ್ದು ಈ ಪ್ರಶಸ್ತಿಯನ್ನು ಪಡೆಯಲು ಸಂತೋಷವಾಗುತ್ತದೆ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ತಮ್ಮ ಸಂತಸವನ್ನು ಹಂಚಿಕೊಂಡರು.

Facebook Comments

Sri Raghav

Admin