ಐಸಿಸಿ ಟೆಸ್ಟ್ ರ್ಯಾಕಿಂಗ್‍ನಲ್ಲಿ ಭಾರತ ನಂಬರ್ ನಂ.1

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ,ಮೇ.13-ಐಸಿಸಿ ಟೆಸ್ಟ್ ರ್ಯಾಕಿಂಗ್‍ನಲ್ಲಿ ಭಾರತ ಮತ್ತೆ ಮೊದಲ ಸ್ಥಾನ ಪಡೆದುಕೊಂಡಿದೆ. ಐಸಿಸಿ ಇಂದು ಬಿಡುಗಡೆ ಮಾಡಿರುವ ರ್ಯಾಕಿಂಗ್ ಪಟ್ಟಿಯಲ್ಲಿ ಭಾರತ 121 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿದೆ.

ವಿಶ್ವ ಟೆಸ್ಟ್ ಪಂದ್ಯದಲ್ಲಿ ಭಾರತದ ಎದುರಾಳಿಯಾಗಿರುವ ನ್ಯೂಜಿಲ್ಯಾಂಡ್ 120 ಅಂಕಗಳೊಂದಿಗೆ ಎರಡನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಭಾರತ 24 ಪಂದ್ಯಗಳಲ್ಲಿ 1914 ಪಾಯಿಂಟ್ ಗಳಿಸಿ ಮೊದಲ ಸ್ಥಾನಕ್ಕೇರಿದ್ದರೆ ನ್ಯೂಜಿಲ್ಯಾಂಡ್ ತಾನಾಡಿದ 18 ಪಂದ್ಯಗಳಲ್ಲಿ 2166 ಪಾಯಿಂಟ್‍ಗಳಿಸಿ ಎರಡನೆ ಸ್ಥಾನ ಪಡೆದುಕೊಂಡಿದೆ.

ಇಂಗ್ಲೆಂಡ್ 109 ಅಂಕಗಳೊಂದಿಗೆ ಮೂರನೆ ಸ್ಥಾನ ಪಡೆದುಕೊಂಡಿದ್ದರೆ ಬಲಿಷ್ಠ ಆಸ್ಟ್ರೇಲಿಯಾ ತಂಡ 108 ಅಂಕಗಳೊಂದಿಗೆ ನಾಲ್ಕನೆ ಸ್ಥಾನಕ್ಕೆ ಕುಸಿದಿದೆ.94 ಅಂಕದೊಂದಿಗೆ ಪಾಕಿಸ್ತಾನ ಐದು ಹಾಗೂ 84 ಅಂಕ ಪಡೆದಿರುವ ವೆಸ್ಟ್‍ಇಂಡೀಸ್ ಆರನೆ ಸ್ಥಾನ ದಕ್ಕಿಸಿಕೊಂಡಿವೆ.

ದಕ್ಷಿಣ ಆಫ್ರಿಕಾ ಏಳು ಹಾಗೂ ಶ್ರೀಲಂಕಾ ಎಂಟನೆ ಸ್ಥಾನಕ್ಕೆ ಕುಸಿದುಬಿದ್ದಿವೆ. ಒಂಬತ್ತು ಮತ್ತು ಹತ್ತನೆ ಸ್ಥಾನಗಳನ್ನು ಕ್ರಮವಾಗಿ ಬಾಂಗ್ಲಾ ಮತ್ತು ಜಿಂಬಾಬ್ವೆ ಪಡೆದುಕೊಂಡಿವೆ.

ಮೊದಲ ಎರಡು ಸ್ಥಾನಗಳನ್ನು ಆಲಂಕರಿಸಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಜೂ.18 ರಂದು ಸೌತಾಂಪ್ಟನ್‍ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ನಲ್ಲಿ ಸೆಣಸಲಿವೆ.

Facebook Comments

Sri Raghav

Admin