ಗಿನ್ನಿಸ್ ವಿಶ್ವದಾಖಲೆ ಸೃಷ್ಟಿಸಿದ ಅತಿ ವೇಗದ ವಿದ್ಯುತ್ ಐಸ್ ಕ್ರೀಮ್ ವ್ಯಾನ್

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್, ಸೆ.10- ಬ್ರಿಟಿಷ್ ಸಂಶೋಧಕರೊಬ್ಬರು ಗಿನ್ನಿಸ್ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅತ್ಯಂತ ವೇಗದಲ್ಲಿ ಎಲೆಕ್ಟ್ರಿಕ್ ಐಸ್‍ಕ್ರೀಮ್ ವ್ಯಾನ್ ಚಾಲನೆ ಮಾಡಿ ಹೊಸ ವಿಕ್ರಮ ಸಾಧಿಸಿದ್ದಾರೆ.

ಇಂಗ್ಲೆಂಡ್‍ನ ಅನ್ವೇಷಕ ಎಡ್ ಚೈನಾ ತಮ್ಮ ಪರಿಸರ ಸ್ನೇಹಿ ವಾಹನವನ್ನು ಗಂಟೆಗೆ 70 ಮೈಲಿ ವೇಗದಲ್ಲಿ ಚಾಲನೆ ಮಾಡಿ ಫಾಸ್ಟೆಸ್ಟ್ ಎಲೆಕ್ಟ್ರಿಕ್ ಐಸ್ ಕ್ರೀಮ್ ವ್ಯಾನ್ ಎಂಬ ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.

ಎಡ್ ಚೈನಾ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಬ್ರಿಟಿಷ್ ಅನ್ವೇಷಕ. ಈ ಮೊದಲು ಡಿಸೇಲ್ ಎಂಜಿನ್ ಹೊಂದಿದ್ದ ವ್ಯಾನ್‍ನನ್ನು ಎರಡು ವರ್ಷಗಳ ಕಾಲ ಶ್ರಮವಹಿಸಿ ವಿದ್ಯುತ್ ಐಸ್ ಕ್ರೀಮ್ ವ್ಯಾನ್ ಆಗಿ ಪರಿವರ್ತಿಸಿದರು.

ಬ್ರಿಟನ್‍ನ ಯಾರ್ಕ್‍ಸೈರ್‍ನ ವಿಮಾನ ನಿಲ್ದಾಣದಲ್ಲಿ ಎಡ್ ಚೈನ್ ತಮ್ಮ ವಿದ್ಯುತ್ ಚಾಲಿತ ಐಸ್ ಕ್ರೀಮ್ ವ್ಯಾನ್‍ನನ್ನು ಗಂಟೆಗೆ 70 ಮೈಲಿ ವೇಗದಲ್ಲಿ ಚಾಲನೆ ಮಾಡಿದರು. ಇಷ್ಟು ವೇಗದಲ್ಲಿ ಈವರೆಗೆ ಯಾವ ಎಲೆಕ್ಟ್ರಿಕ್ ಐಸ್ ಕ್ರೀಮ್ ವ್ಯಾನ್ ಚಲಿಸಿಲ್ಲ. ಈ ಸಾಧನೆ ಹೊಸ ಗಿನ್ನಿಸ್ ವಿಶ್ವದಾಖಲೆ ಪುಟದಲ್ಲಿ ಸೇರ್ಪಡೆಯಾಗಿದೆ.

ಇವರು ತಮ್ಮ ವಾಹನಕ್ಕೆ ಎಡ್ಸ್ ಎಲೆಕ್ಟಿಕ್ ಐಸಸ್ ಎಂಬ ಹೆಸರಿಟ್ಟಿದ್ದಾರೆ. ಗಿನ್ನಿಸ್ ವಿಶ್ವ ದಾಖಲೆ ನಂತರ ತಮ್ಮ ಪ್ರಮಾಣ ಪತ್ರದೊಂದಿಗೆ ಐಸ್ ಕ್ರೀಮ್ ತಿನ್ನುತ್ತಾ ಮಾಧ್ಯಮಗಳಿಗೆ ಎಡ್ ಫೋಸ್ ನೀಡಿದರು.

ಪರಿಸರ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸಲು ನಾನು ಡಿಸೇಲ್ ಎಂಜಿನ್‍ನನ್ನು ವಿದ್ಯುತ್ ಚಾಲಿತ ವಾಹನವಾಗಿ ಪರಿವರ್ತಿಸಿದೆ. ಐಸ್ ಕ್ರೀಮ್ ಮಾರುವ ಎಲ್ಲರೂ ಡಿಸೇಲ್ ಬದಲು ಎಲೆಕ್ಟ್ರಿಕ್ ವಾಹನಗಳನ್ನು ಬಳಸಬೇಕೆಂಬುದು ನನ್ನ ಸಲಹೆ ಎನ್ನುತ್ತಾರೆ.

Facebook Comments