ಕೊರೊನಾಗೆ ಕನ್ನಡಿಗನ ಮದ್ದು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.17- ಕೊರೊನಾಗೆ ಕನ್ನಡಿಗ ವೈದ್ಯ ರಾದ ಡಾ.ಹೃಷಿಕೇಶ್ ದಾಂಬ್ಲೆ ಅವರು ಔಷಯನ್ನು ಸಿದ್ಧಪಡಿಸಿದ್ದು, ಐಸಿಎಂಆರ್ ಅನು ಮತಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಫರಿದಾಬಾದ್ ಜೈವಿಕ ತಂತ್ರಜ್ಞಾನ ಪ್ರಯೋಗಾಲಯದಲ್ಲಿ ಆಯುರ್ವೇದ ಔಷಧ ಕೊರೋನಾ ವೈರಸ್ ಹೊಂದಿರುವ ಕುರಿತು ವರದಿಯಾಗಿದ್ದು ಬೆಂಗಳೂರು ಮೂಲಕ ಸಸ್ಯಾಧಾರಿತ ಔಷ ಕಂಪನಿ ಇದಾಗಿದ್ದು ಕನ್ನಡಿಗರಾದ ಡಾ.ಹೃಷಿಕೇಶ್ ದಾಂಬ್ಲೆ ಸಿದ್ಧಪಡಿಸಿರುವ ಸಸ್ಯಧಾರಿತ ಔಷ ಕೊರೋನಾ ವೈರಸ್ ನಾಶ ಪಡಿಸಲಿದೆ.

ಐಸಿಎಂಆರ್ ಅನುಮತಿ ನೀಡಿದರೆ ಮಾನವರ ಮೇಲೆ ಪ್ರಯೋಗ ಮಾಡಲಾಗುವುದು ಎಂದು ಹೇಳಿಕೊಂಡಿದ್ದಾರೆ. ಮೂರು ತಿಂಗಳೊಳಗೆ ಈ ಔಷಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವ ಸಾಧ್ಯತೆಯ ಬಗ್ಗೆಯೂ ಕೂಡ ಅವರು ತಿಳಿಸಿದ್ದಾರೆ.

ಸುಮಾರು 4 ಸಾವಿರ ವರ್ಷಗಳಿಂದ ನಮ್ಮಲ್ಲೇ ಇರುವ ಸಸ್ಯಗಳಿಂದ ಈ ಔಷಧವನ್ನು ಸಿದ್ಧಪಡಿಸಿರುವುದಾಗಿ ಹೇಳಿರುವ ಅವರು, ಯಾವ ಸಸ್ಯದಿಂದ ಈ ಔಷಧವನ್ನು ತಯಾರಿಸಲಾಗಿದೆ ಎಂಬ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ.

ಐಸಿಎಂಆರ್ ನಿಗದಿ ಪಡಿಸಿದ ಪ್ರಯೋಗಾಲಯದಲ್ಲಿ ದಾಂಬ್ಲೆ ಅವರ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಯಾವುದೇ ಅಡ್ಡ ಪರಿಣಾಮವನ್ನೂ ಬೀರಿಲ್ಲ. 600 ಸೋಂಕಿತರ ಮೇಲೆ ಇದನ್ನು ಪ್ರಯೋಗ ಮಾಡಲು ಕೂಡ ತಯಾರು ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

Facebook Comments

Sri Raghav

Admin