SHOCKING : ಬೆಂಗಳೂರಿನಲ್ಲಿ ದಿನೇ ದಿನೇ ಏರುತ್ತಿದೆ ಐಸಿಯು ಸೇರುತ್ತಿರುವ ಸೋಂಕಿತರ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.9- ಕೊರೊನಾ ಹಾಟ್‍ಸ್ಪಾಟ್ ಆಗಿ ಪರಿವರ್ತನೆಯಾಗಿರುವ ಸಿಲಿಕಾನ್ ಸಿಟಿಯಲ್ಲಿ ಐಸಿಯುಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಿಂದ ಒಂದು ಸಾವಿರಕ್ಕೂ ಹೆಚ್ಚು ಸೋಂಕಿತರು ಐಸಿಯುಗಳಿಗೆ ದಾಖಲಾಗಿದ್ದು, ನಿನ್ನೆ ಒಂದೇ ದಿನ 115 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಐಸಿಯುಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜುಲೈ 2ರಂದು 113, 3ರಂದು 121, 4ರಂದು 124, 5ರಂದು 131, 6ರಂದು 166, 7ರಂದು 290, ನಿನ್ನೆ 115 ಮಂದಿ ಐಸಿಯುಗೆ ದಾಖಲಾಗಿದ್ದಾರೆ.ಇಂದೂ ಸಹ ಹಲವಾರು ಸೋಂಕಿತರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮತ್ತಷ್ಟು ಮಂದಿ ಐಸಿಯುಗೆ ದಾಖಲಾಗುವ ಸಾಧ್ಯತೆಗಳಿವೆ.

31ರ ವರೆಗೆ ಮಾರುಕಟ್ಟೆ ಸೀಲ್‍ಡೌನ್: ನಗರದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್ ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಮಾರುಕಟ್ಟೆ ಸೀಲ್‍ಡೌನ್ ಅವಧಿಯನ್ನು ಜು.31ರ ವರೆಗೆ ವಿಸ್ತರಿಸಲಾಗಿದೆ.

ಲಾಕ್‍ಡೌನ್ ಬಳಿಕ ಮಾರುಕಟ್ಟೆಗಳಲ್ಲಿ ವಾಣಿಜ್ಯ-ವಹಿವಾಟುಗಳು ಪುನರಾರಂಭಗೊಂಡಿದ್ದವು. ಅದರಲ್ಲೂ ಮಾರುಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಅತಿ ಹೆಚ್ಚು ಸೋಂಕಿತರು ಕಂಡುಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ಅವರು ಸೀಲ್‍ಡೌನ್ ಅವಧಿಯನ್ನು 31ರ ವರೆಗೆ ವಿಸ್ತರಿಸಿದ್ದಾರೆ.

Facebook Comments