ಇಡ್ಲಿ ತಟ್ಟೆಯಲ್ಲಿ ಬೆರಳು ಸಿಲುಕಿ ನರಳಾಡಿದ ಮಗು, ರಕ್ಷಣೆಗೆ ಹರಸಾಹಸಪಟ್ಟ ವೈದ್ಯರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಅದೆಷ್ಟೇ ಜಾಗೃತಿ ವಹಿಸಿದರು ಕೆಲವೊಮ್ಮೆ ಸಾಲದು ಎಂಬಂತಹ ಘಟನೆಗಳು ನಡೆದು ಹೋಗುತ್ತವೆ.  ಅಂಥಹ ಒಂದು ಘಟನೆ ನಗರದಲ್ಲಿ ನಡೆದಿದ್ದು ಮಾರತ್‍ಹಳ್ಳಿಯಲ್ಲಿರುವ ರೈನ್ ಬೋ ಮಕ್ಕಳ ಆಸ್ಪತ್ರೆ ವೈದ್ಯರ ಸಮಯಪ್ರಜ್ಞಾ ಮತ್ತು ನೈಪುಣ್ಯತೆಯಿಂದಾಗಿ ಭಾರೀ ಅಪಾಯ ತಪ್ಪಿದೆ.

ನಡೆದದ್ದೇನೆಂದರೆ 18 ತಿಂಗಳ ಮಗುವಿನ ಬೆರಳು ಅಚಾನಕ್ ಆಗಿ ಇಡ್ಲಿ ತಟ್ಟೆಯಲ್ಲಿರುವ ಚಿಕ್ಕ ರಂಧ್ರದೊಳಗೆ ಸಿಕ್ಕಿ ಹಾಕಿಕೊಂಡು ಬಿಟ್ಟಿತು. ಪರಿಣಾಮವಾಗಿ ಕೆಲವೇ ನಿಮಿಷದೊಳಗೆ ರಕ್ತಸ್ರಾವದ ಜೊತೆಗೆ ಬೆರಳು ಕೂಡಾ ಊದಿಕೊಳ್ಳಲಾರಂಭಿಸಿತು. ಇನ್ನೇನು ಮಗುವಿನ ಬೆರಳು ಕತ್ತರಿಸಿ ಬಿಡುತ್ತೇನೋ ಅನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿ ಬಿಟ್ಟಿತು.

ಆ ಕೂಡಲೇ ಮಗುವನ್ನು ರೈನ್ ಬೋ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಕೂಡಲೇ ಗ್ರಹಿಸಿದ ಆಸ್ಪತ್ರೆಯ ವೈದ್ಯರು ತಕ್ಷಣ ತೆಗೆದುಕೊಂಡ ನಿರ್ಧಾರ ನಿಜಕ್ಕೂ ವಿಚಿತ್ರವಾಗಿತ್ತು.

ಆಸ್ಪತ್ರೆಯಲ್ಲಿನ ಮೆಂಟೆನೆನ್ಸ್ ವಿಭಾಗಕ್ಕೆ ಸೂಚಿಸಿ ಸ್ಟೀಲ್ ಕಟಿಂಗ್ ಯಂತ್ರವನ್ನ ತರಿಸಿಕೊಂಡು ನೇರವಾಗಿ ಇಡ್ಲಿ ತಟ್ಟೆಯನ್ನೇ ಕತ್ತರಿಸುವುದಕ್ಕೆ ಮುಂದಾದರು. ಸತತ ಒಂದು ಗಂಟೆಯ ಪ್ರಯತ್ನದ ನಂತರ ಅವರ ಕಾರ್ಯ ಕೈಗೂಡಿತ್ತು.

ಇಡ್ಲಿ ತಟ್ಟೆಯ ರಂಧ್ರದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮಗುವಿನ ಬೆರಳು ಕೊನೆಗೂ ಹೊರ ಬಂದಿತ್ತು. ಗಂಭೀರ ಸಮಸ್ಯೆಯೊಂದು ವೈದ್ಯರ ಪರಿಶ್ರಮದ ಫಲವಾಗಿ ಪರಿಹಾರಗೊಂಡಿತ್ತು.

Facebook Comments