ಛತ್ತೀಸ್‍ಘಡದಲ್ಲಿ ಮತಗಟ್ಟೆ ಬಳಿಯೇ ಬಾಂಬ್ ಸ್ಫೋಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬಲರಾಮ್‍ಪುರ,ಏ.23-ಛತ್ತೀಸ್‍ಘಡದಲ್ಲಿ ಇಂದು ನಡೆದ 3ನೇ ಹಂತದ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ನಕ್ಸಲರು ಬಾಂಬ್ ಸ್ಫೋಟಿಸಿ ಮತದಾನಕ್ಕೆ ಅಡ್ಡಿಯುಂಟು ಮಾಡಿದ ಘಟನೆ ನಡೆದಿದೆ.

ಬಲರಾಮ್‍ಪುರ ಜಿಲ್ಲೆಯ ಮನ್ಪುರದ ಮತಗಟ್ಟೆ ಬಳಿ ಇಂದ ನಕ್ಸಲರು ಕಡಿಮೆ ತೀವ್ರತೆಯ ಬಾಂಬ್ ಸ್ಪೋಟಿಸಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು.

ಚುನಾವಣಾಧಿಕಾರಿಗಳು ಕೆಲ ನಿಮಿಷಗಳ ಕಾಲ ಮತದಾನ ಸ್ಥಗಿತಗೊಳಿಸಿದರು. ಮತಗಟ್ಟೆ ಬಳಿ ಜನರು ಸಾಲುಗಟ್ಟಿ ನಿಂತಿದ್ದ ವೇಳೆ ನಕ್ಸಲರು ಐಇಡಿ(ಸುಧಾರಿತ ಸ್ಫೋಟಕ) ಸ್ಫೋಟಿಸಿದರು. ಅದರೆ ಇದು ಕಡಿಮೆ ತೀವ್ರತೆ ಹೊಂದಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.

ಆದರೂ ನಕ್ಸಲರ ಈ ಕೃತ್ಯದಿಂದ ಮತದಾರರು ಭಯಭೀತರಾದರು. ಚುನಾವಣೆಗೆ ಅಡ್ಡಿ ಉಂಟು ಮಾಡುವುದು ಮಾವೋವಾದಿಗಳ ದುರದ್ದೇಶವಾಗಿತ್ತು.

ಒಂದು ಮತ್ತು 2ನೇ ಹಂತದ ಚುನಾವಣೆಗಳಲ್ಲೂ ಸಹ ನಕ್ಸಲರು ಛತ್ತೀಸ್‍ಘಡದ ವಿವಿಧೆಡೆ ಇದೇ ರೀತಿ ಐಇಡಿ ಸ್ಫೋಟಿಸಿ ಆಂತಕ ಸೃಷ್ಟಿಸಿ ಮತದಾನಕ್ಕೆ ಅಡ್ಡಿಪಡಿಸಿದ್ದರು.

Facebook Comments

Sri Raghav

Admin