ಬಾರಾಮುಲ್ಲಾದಲ್ಲಿ ಸ್ಪೋಟಕ ಪತ್ತೆ : ತಪ್ಪಿದ ವಿಧ್ವಂಸಕ ಕೃತ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಆ.4-ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಭಯೋತ್ಪಾದಕರು ಹವಣಿಸುತ್ತಲೇ ಇದ್ದು, ಬಾರಾಮುಲ್ಲಾ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ (ಐಇಡಿ)ವನ್ನು ಭದ್ರತಾ ಪಡೆಗಳು ಪತ್ತೆ ಮಾಡಿವೆ. ಇದರಿಂದಾಗಿ ಮುಂದೆ ನಡೆಯಲಿದ್ದ ವಿಧ್ವಂಸಕ ಕೃತ್ಯವೊಂದು ತಪ್ಪಿದಂತಾಗಿದೆ.

ಬಾರಾಮುಲ್ಲಾ ಜಿಲ್ಲೆಯ ಪಠಾಣ್ ಪ್ರದೇಶದ ಹಮ್ರಿ ಬಳಿ ರಸ್ತೆಯೊಂದರಲ್ಲಿ ಈ ಸ್ಫೋಟಕವನ್ನು ಯೋಧರು ಪತ್ತೆ ಮಾಡಿದರು. ರಸ್ತೆಯಲ್ಲಿ ಸಂಚರಿಸುವ ಸೇನೆ ಮತ್ತು ಸಾರ್ವಜನಿಕ ವಾಹನಗಳನ್ನು ಗುರಿಯಾಗಿಟ್ಟುಕೊಂಡು ಸ್ಫೋಟ ನಡೆಸಲು ಉಗ್ರರು ಹವಣಿಸಿದ್ದರು.

ಪತ್ತೆಯಾದ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಅನಾಹುತ ತಪ್ಪಿದಂತಾಗಿದೆ. ಕಳೆದ ವಾರ ಪುಲ್ವಾಮಾ ಜಿಲ್ಲೆಯ ರಸ್ತೆಯೊಂದರಲ್ಲಿ ಸಹ ಇದೇ ರೀತಿಯ ಐಇಡಿ ಸ್ಫೋಟಕ ಪತ್ತೆಯಾಗಿತ್ತು.

Facebook Comments

Sri Raghav

Admin