ಐಐಎಫ್‍ಎ ಪ್ರಶಸ್ತಿ : ಶ್ರೀದೇವಿ, ಇರ್ಫಾನ್‍ಗೆ ಶ್ರೇಷ್ಠ ನಟಿ, ನಟ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Irfan--01

ಬ್ಯಾಂಕಾಕ್, ಜೂ.25- ಮಾಮ್ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಹಿರಿಯ ಅಭಿನೇತ್ರಿ ದಿವಂಗತ ಶ್ರೀದೇವಿ ಅವರಿಗೆ ಪ್ರತಿಷ್ಠಿತ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2018(ಐಐಎಫ್‍ಎ ಅವಾಡ್ರ್ಸ್) ಸಮಾರಂಭದಲ್ಲಿ ಮರಣೋತ್ತರವಾಗಿ ಶ್ರೇಷ್ಠ ನಟಿ ಪ್ರಶಸ್ತಿ ನೀಡಲಾಗಿದೆ.   ಹಿಂದಿ ಮೀಡಿಯಂ ಸಿನಿಮಾದ ಅತ್ಯುತ್ತಮ ನಟನೆಗಾಗಿ ಪ್ರತಿಭಾವಂತ ನಟ ಇರ್ಫಾನ್ ಖಾನ್ ಶ್ರೇಷ್ಠ ನಟ ಗೌರವಕ್ಕೆ ಪಾತ್ರರಾಗಿದ್ದಾರೆ. ವಿದ್ಯಾ ಬಾಲನ್ ಅಭಿನಯದ ತುಮ್ಹಾರಿ ಸುಲು ಅತ್ಯುತ್ತಮ ಪ್ರಶಸ್ತಿ ಗಳಿಸಿದೆ.   ಥೈಲೆಂಡ್ ರಾಜಧಾನಿ ಬ್ಯಾಂಕಾಂಕ್ ಸಿಯಾಮ್ ನಿರಾಮಿತ್ ಥಿಯೇಟರ್‍ನಲ್ಲಿ ನಿನ್ನೆ ರಾತ್ರಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಐಐಎಫ್‍ಎ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು.

DggfQM8VAAMTUc8

ಶ್ರೇಷ್ಠ ನಟಿ ಪ್ರಶಸ್ತಿಗೆ ಪಾತ್ರವಾದ ದಿವಂಗತ ಶ್ರೀದೇವಿ ಅವರ ಪರವಾಗಿ ಅವರ ಪತ್ನಿ-ನಿರ್ಮಾಪಕ ಬೋನಿ ಕಪೂರ್ ಪ್ರಶಸ್ತಿ ಸ್ವೀಕರಿಸಿದರು. ನ್ಯೂರೋ ಎಂಡೋಕ್ರೇನ್ ಟ್ಯೂಮರ್ ಕ್ಯಾನ್ಸರ್ ಚಿಕಿತ್ಸೆಯಲ್ಲಿರುವ ಇರ್ಫಾನ್ ಪರವಾಗಿ ನಟಿ ಶ್ರದ್ಧಾ ಕಪೂರ್ ಪ್ರಶಸ್ತಿ ಪಡೆದರು. ಹಿಂದಿ ಮೀಡಿಯಂ ಸಿನಿಮಾಗಾಗಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾದರು.   ಮಾಮ್ ಚಿತ್ರದ ಅಭಿನಯಕ್ಕಾಗಿ ನವಾಜುದ್ಧೀನ್ ಸಿದ್ಧಿಖಿ ಶ್ರೇಷ್ಠ ಪೋಷಕ ನಟ ಹಾಗೂ ಸಿಕ್ರೇಟ್ ಸೂಪರ್‍ಸ್ಟಾರ್ ಸಿನಿಮಾದ ಪ್ರಾತ ಪೋಷಣೆಗಾಗಿ ಮಹೆರ್ ವಿಜ್ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಗೆ ಭಾಜನರಾದರು.  ಈ ವರ್ಷ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದ್ದ ನ್ಯೂಟನ್ ಸಿನಿಮಾ ಶ್ರೇಷ್ಠ ಕಥೆ ಪ್ರಶಸ್ತಿ ಗಳಿಸಿದೆ.

DgfLzv3UcAIln6X

ಜಬ್ ಹ್ಯಾರಿ ಮೆಟ್ ಸೆಜಲ್ ಸಿನಿಮಾದ ಹವಾಯೀನ್ ಹಾಡಿಗಾಗಿ ಅರಿಜಿತ್ ಸಿಂಗ್ ಶ್ರೇಷ್ಠ ಹಿನ್ನೆಲೆ ಗಾಯಕ ಹಾಗೂ ಸಿಕ್ರೇಟ್ ಸೂಪರ್‍ಸ್ಟಾರ್ ಚಿತ್ರದ ಮೇ ಕೌನ್ ಹೂ ಗೀತೆಗಾಗಿ ಮೇಘನಾ ಮಿಶ್ರಾ ಶ್ರೇಷ್ಠ ಹಿನ್ನೆಲೆ ಗಾಯಕಿ ಪ್ರಶಸ್ತಿಗೆ ಪಾತ್ರವಾದರು.  ಬದ್ರಿನಾಥ್ ಕಿ ದುಲ್ಹನಿಯಾ ಸಿನಿಮಾದ ಸಂಗೀತ ಸಂಯೋಜನೆಗಾಗಿ ಅಮಾಲ್ ಮಲ್ಲಿಕ್, ತಾನಿಷ್ಕ್ ಬಾಗ್ಚಿ ಮತ್ತು ಅಖಿಲ್ ಸಚ್‍ದೇವ ಅವರು ಶ್ರೇಷ್ಠ ಸಂಗೀತ ನಿರ್ದೇಶನ ಪ್ರಶಸ್ತಿ ಗಳಿಸಿದರು.   500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ಅಭಿನೇತ ಅನುಪಮ್ ಖೇರ್ ಅವರಿಗೆ ಈ ಸಮಾರಂಭದಲ್ಲಿ ವಿಶಿಷ್ಟ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಬಾಲಿವುಡ್ ಖ್ಯಾತನಾಮರಾದ ದಿವಂಗತಶ್ರೀದೇವಿ, ವಿನೋದ್ ಖನ್ನಾ ಮತ್ತು ಶಶಿ ಕಪೂರ್ ಅವರಿಗೆ ಐಐಎಫ್‍ಎ ಸಮಾರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

DgeYsGkWsAE6Udp

ಸಮಾರಂಭಕ್ಕೆ ರೇಖಾ ರಂಗು :

DggabG6VAAI0W5g
ತಾರೆಗಳ ಮೆರುಗಿನ ಈ ಅದ್ದೂರಿ ಸಮಾರಂಭದಲ್ಲಿ 63 ವರ್ಷದ ಹಿರಿಯ ನಟಿ ರೇಖಾ ಕೆಲವು ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾದರು. ಬಹು ವರ್ಷಗಳ ನಂತರ ಸಾರ್ವಜನಿಕ ಕಾರ್ಯಕ್ರಮದಲ್ಲಿ ರೇಖಾ ನೀಡಿದ ನೃತ್ಯ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.
ನಿರ್ದೇಶಕ-ನಿರ್ಮಾಪಕ ಕರಣ್ ಜೋಹರ್ ಮತ್ತು ನಟ ರೀತೇಶ್ ದೇಶ್‍ಮುಖ ಕಾರ್ಯಕ್ರಮ ನಡೆಸಿಕೊಟ್ಟರು. ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್, ಅನಿಲ್ ಕಪೂರ್, ವರುಣ್ ಧವನ್, ಕೃತಿ ಸನೋನ್, ಕೊಂಕಣ್ ಸೇನ್ ವರ್ಮ, ಆಯುಷ್ಮಾನ್ ಖುರಾನ, ದಿಯಾ ಮಿರ್ಜಾ, ಬಾಬಿ ಡಿಯೋಲ್ ಸೇರಿದಂತೆ ಚಿತ್ರರಂಗದ ಖ್ಯಾತನಾಮರು ಮತ್ತು ತಂತ್ರಜ್ಞರು ಸಮಾರಂಭಕ್ಕೆ ಮೆರುಗು ನೀಡಿದರು.

DgerxafXkAE-F7A

DgezbjdX4AAXk4v

DgUCephWsAAZDsq

DgUKSNdX4AAzh_E

Facebook Comments

Sri Raghav

Admin