80 ಲಕ್ಷ ಮೌಲ್ಯದ 250ಕೆಜಿ ಗಾಂಜಾ ಸಮೇತ ಅತ್ತಿಬೆಲೆ ಪೊಲೀಸರಿಗೆ ಸಿಕ್ಕಿಬಿದ್ದ ವ್ಯಕ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಆನೇಕಲ್, ಜು.17 -ಆಂಧ್ರದಿಂದ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 80 ಲಕ್ಷ ಮೌಲ್ಯದ ಸುಮಾರು 250 ಕೆಜಿ ಗಾಂಜಾವನ್ನು ಅತ್ತಿಬೆಲೆ ಫೋಲಿಸರು ವಶಪಡಿಸಿಕೊಂಡಿದ್ದಾರೆ. ಆಂಧ್ರಮೂಲದ ಕುಮಾರ್ (45) ಬಂಧಿತ ಆರೋಪಿ.

ಆಂಧ್ರದಿಂದ ತಮಿಳುನಾಡಿಗೆ ಸ್ವಿಫ್ಟ್ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಆಧರಿಸಿ ಪ್ರೊ ಫೆಶನರಿ ಡಿವೈಎಸ್‍ಪಿ ರೀನಾ ಸುವರ್ಣ ಹಾಗೂ ಅತ್ತಿಬೆಲೆ ಫೋಲಿಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ನವೀನ್ ಮತ್ತು ಅವರ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಕರ್ನಾಟಕ ಗಡಿಭಾಗವಾದ ಬಳ್ಳೂರು ಗೇಟ್ ಬಳಿ ಬಂಧಿಸಿದ್ದಾರೆ.

ಆರೋಪಿಗಳು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಗಾಂಜಾವನ್ನು ಬಾಕ್ಸ್ ಗಳ ಮೂಲಕ ಪ್ಯಾಕಿಂಗ್ ಮಾಡಿಕೊಂಡು, ಜೊತೆಗೆ ಆಯಾ ರಾಜ್ಯಕ್ಕೆ ಹೋದ ಸಂದರ್ಭದಲ್ಲಿ ಕಾರಿನ ನಂಬರ್ ಪ್ಲೇಟ್‍ಗಳನ್ನು ಬದಲಾಯಿಸುತ್ತಿದ್ದರು ಎನ್ನಲಾಗಿದೆ.

ಕಾರಿನಿಂದ ಚಾಲಕ ಪರಾರಿಯಾಗಿದ್ದಾನೆ, ಪೊಲೀಸ್‍ರಾದ ಪ್ರಕಾಶ್, ಶಿವಪ್ರಕಾಶ್,ಇಪ್ರಾನ್, ರಾಘವೇಂದ್ರ ಮತ್ತಿತರರು ಕಾರ್ಯಾಚರಣೆಯಲ್ಲಿ ಸಾಥ್ ನೀಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುವ ಅತ್ತಿಬೆಲೆ ಫೋಲಿಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments