ಲೈಸೆನ್ಸ್ ಅವಧಿ ಮುಗಿದರೂ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ : ಸಂಸದೆ ಸುಮಲತಾ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜು.14- ಅನುಮತಿ ಇಲ್ಲದೆ ಹಾಗೂ ಲೈಸೆನ್ಸ್ ಅವಧಿ ಮುಗಿದರೂ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಆರೋಪ ಮಾಡಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯಿಂದ ಕೆಆರ್‍ಎಸ್ ಡ್ಯಾಂನಲ್ಲಿ ಬಿರುಕು ಬಿಟ್ಟಿದೆಯಾ ಎಂದು ದಿಶಾ ಸಭೆಯಲ್ಲಿ ಪ್ರಶ್ನಿಸಿದ್ದೆ. ಆದರೆ ಇದನ್ನೇ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ಬಳಕೆಯಿಂದ ಕೆಆರ್‍ಎಸ್ ಡ್ಯಾಂನಲ್ಲಿ ಬಿರುಕು ಸಂಬಂಧ ರೈತರು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಇದು ತಪ್ಪೆ? ಇಲ್ಲ ನಾನು ಸುಮ್ಮನಿರಬೇಕಿತ್ತಾ ಎಂದರು.ನಾನು ಎಲ್ಲೂ ಸಹ ಕೆಆರ್‍ಎಸ್ ಬಿರುಕು ಬಿಟ್ಟಿದೆ ಎಂದು ಹೇಳಿಲ್ಲ. ಸಂಸದೆಯಾಗಿ ದಿಶಾಸಭೆಯಲ್ಲಿ ಪ್ರಶ್ನಿಸಿದ್ದ ಎಂದು ಸ್ಪಷ್ಟನೆ ನೀಡಿದರು.

Facebook Comments