ಅಕ್ರಮ ಕಲ್ಲು, ಮಣ್ಣು ಬಳಕೆ ಮಾಡಿದ ಹೆದ್ದಾರಿ ನಿರ್ಮಾಣ ಸಂಸ್ಥೆಗೆ 77 ಕೋಟಿ ದಂಡ

ಈ ಸುದ್ದಿಯನ್ನು ಶೇರ್ ಮಾಡಿ

ಜಲ್ನಾ,ಜೂ.24-ಮಹಾರಾಷ್ಟ್ರದ ಹಲವಾರು ಪ್ರದೇಶಗಳಲ್ಲಿ ಅಕ್ರಮವಾಗಿ ಮಣ್ಣು ಮತ್ತು ಕಲ್ಲು ಹೊರತೆಗೆದು ಎಕ್ಸ್‍ಪ್ರೆಸ್ ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ಬಳಸಿಕೊಂಡಿದ್ದ ಖಾಸಗಿ ನಿರ್ಮಾಣ ಸಂಸ್ಥೆಯೊಂದಕ್ಕೆ 77 ಕೋಟಿ ರೂ.ಗಳ ದಂಡ ವಿಧಿಸಲಾಗಿದೆ. ಕಂದಾಯ ಇಲಾಖೆ ತನಿಖಾ ತಂಡ ಇತ್ತಿಚೆಗೆ ಪರಿಶೀಲನೆ ಕೈಗೊಂಡಿದ್ದ ಸಂದರ್ಭದಲ್ಲಿ ಜಮವಾಡಿ, ಗೋಂಡೆಗಾಂವ್, ವರೂದ್, ನಂದಾಪುರ್, ಶ್ರೀಕೃಷ್ಣನಗರ ಮತ್ತು ಥಾರ್ ಪ್ರದೇಶಗಳಲ್ಲಿ ಕಲ್ಲು, ಮಣ್ಣು ಹೊರ ತೆಗೆದಿರುವುದು ಪತ್ತೆಯಾಗಿತ್ತು.

ಕಲ್ಲು, ಮಣ್ಣು ಹೊರ ತೆಗೆದಿದ್ದ ಖಾಸಗಿ ನಿರ್ಮಾಣ ಸಂಸ್ಥೆ ತಾವು ನಿರ್ಮಿಸುತ್ತಿರುವ ಎಂಟು ಪಥದ ಮುಂಬೈ-ನಾಗ್ಪುರ್ ಎಕ್ಸ್‍ಪ್ರೆಸ್ ಹೆದ್ದಾರಿ ಕಾಮಗಾರಿಗೆ ಬಳಸಿಕೊಂಡಿರುವುದು ತಿಳಿದುಬಂದಿತ್ತು. ಹೀಗಾಗಿ ತಹಸಿಲ್ದಾರ್ ಶ್ರೀಕಾಂತ್ ಭುಜಬಲ್ ಅವರು ಸಂಸ್ಥೆಗೆ ನೋಟಿಸ್ ಜಾರಿ ಮಾಡಿ 77 ಕೋಟಿ ರೂ. ದಂಡ ಪಾವತಿಸುವಂತೆ ಸೂಚಿಸಿದ್ದಾರೆ.

ಅಕ್ರಮವಾಗಿ ಕಲ್ಲು, ಮಣ್ಣು ಹೊರತೆಗೆದು ಅಕ್ರಮ ನಡೆಸಿರುವ ಸಂಸ್ಥೆ 55 ಸಾವಿರ ಕೋಟಿ ರೂ.ವೆಚ್ಚದಲ್ಲಿ ಹತ್ತು ಜಿಲ್ಲೆಗಳನ್ನು ಸಂಪರ್ಕಿಸುವ ಮುಂಬೈ-ನಾಗ್ಪುರ್ ಎಕ್ಸ್‍ಪ್ರೆಸ್ ಹೆದ್ದಾರಿ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

Facebook Comments