ಗೆಲುವಿನ ಸಂಭ್ರಮದಲ್ಲಿ `ಐ ಲವ್ ಯು’ ಟೀಮ್

ಈ ಸುದ್ದಿಯನ್ನು ಶೇರ್ ಮಾಡಿ

ಎರಡು ವರ್ಷಗಳಿಂದ ಕಾದಿದ್ದ ಅಭಿಮಾನಿಗಳಿಗೆ ಉಪೇಂದ್ರ ಐ ಲವ್ ಯು ಎನ್ನುತ್ತ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಆರ್.ಚಂದ್ರು ನಿರ್ದೇಶನ ಹಾಗೂ ಉಪೇಂದ್ರ ಅಭಿನಯದ ಬಹು ನಿರೀಕ್ಷಿತ ಚಿತ್ರ ಐ ಲವ್ ಯು ಕಳೆದವಾರ ಅದ್ಧೂರಿಯಾಗಿ ತೆರೆಗೆ ಬಂದಿದೆ. ಬಹುಕಾಲದ ನಂತರ ಥಿಯೇಟರ್‍ಗೆ ಬಂದಿರುವ ಉಪ್ಪಿಯನ್ನು ಅಭಿಮಾನಿಗಳು ಕೂಡ ಅಭಿಮಾನದಿಂದ ಸ್ವಾಗತಿಸುತ್ತಿದ್ದಾರೆ.

ಈ ಖುಷಿಯನ್ನು ಹಂಚಿಕೊಳ್ಳಲು ಐ ಲವ್ ಯು ಚಿತ್ರತಂಡ, ಸಿನಿಮಾ ತೆರೆಕಂಡ ಮರುದಿನವೇ ಮಾಧ್ಯಮಗಳ ಮುಂದೆ ಬಂದು ಪ್ರೆಸ್ ಮೀಟ್ ಮಾಡಿತು. ಈ ಸಂದರ್ಭದಲ್ಲಿ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಕಂ ನಿರ್ಮಾಪಕ ಆರ್. ಚಂದ್ರು, ಐ ಲವ್ ಯು ಚಿತ್ರವನ್ನು ವಿತರಕರು ಉತ್ತಮ ಮೊತ್ತಕ್ಕೆ ಕೊಂಡುಕೊಂಡಿದ್ದಾರೆ.

ಬಿಡುಗಡೆಗೂ ಮೊದಲೇ ಹೂಡಿದ ಹಣ ವಾಪಾಸ್ ಬಂದಿದೆ. ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಚಿತ್ರ ಹೌಸ್‍ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ. ಚಿತ್ರವನ್ನು ನೋಡಿದ ಎಲ್ಲರೂ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಚಿತ್ರವನ್ನು ಕೊಂಡುಕೊಂಡಿರುವುದಕ್ಕೆ ವಿತರಕರು ಕೂಡ ಖುಷಿಯಾಗಿದ್ದಾರೆ.

ಮುಂದಿನ ದಿನಗಳಲ್ಲಿ ಉಪೇಂದ್ರ ಬೇರೆ ಚಿತ್ರಗಳಲ್ಲಿ ಬ್ಯುಸಿಯಾಗುತ್ತಿರುವುದರಿಂದ, ಅವರ ಸಮಯ ನೋಡಿಕೊಂಡು ಬಿಡುಗಡೆಯಾದ ಮರುದಿನವೇ ಪ್ರೆಸ್ ಮೀಟ್ ಆಯೋಜಿಸಲಾಯಿತು. ಚಿತ್ರದ ಇಂಥz್ದದು ಯಶಸ್ಸಿಗೆ ಕಾರಣವಾದವರಿಗೆ ಧನ್ಯವಾದಗಳು ಎಂದು ಹೇಳಿದರು.

ಚಿತ್ರದ ಬಿಡುಗಡೆಯ ನಂತರದ ಬೆಳವಣಿಗೆಗಳ ಬಗ್ಗೆ ಮಾತನಾಡಿದ ನಟ ಉಪೇಂದ್ರ, ನಾನು ಕೂಡ ಡಬ್ಬಿಂಗ್ ಆದ ಮೇಲೆ ಐ ಲವ್ ಯು ಸಿನಿಮಾ ನೋಡಿರಲಿಲ್ಲ. ರಿಲೀಸ್ ಆದ ಮೇಲೆ ಎಲ್ಲರ ಜೊತೆ ನೋಡಿದೆ. ಆಡಿಯನ್ಸ್ ಕಡೆಯಿಂದ ಬರುತ್ತಿರುವ ಪ್ರತಿಕ್ರಿಯೆ ನೋಡಿ ಖುಷಿಯಾಯ್ತು. ಯಾವ ಸಿನಿಮಾ ಗೆಲ್ಲುತ್ತೆ, ಯಾವುದು ಗೆ¯್ಲÉೂೀದಿಲ್ಲ ಅಂತ ಯಾರಿಗೂ ಹೇಳೋಕೆ ಆಗೋದಿಲ್ಲ.

ಅಣ್ಣಾವ್ರು ಹೇಳುವಂತೆ ಸಕ್ಸಸ್ ಅನ್ನೋದು ಒಂದು ಚಿದಂಬರ ರಹಸ್ಯ. ಆದ್ರೆ ಒಂದು ಒಳ್ಳೆಯ ಸಿನಿಮಾ ಆಗೋದಕ್ಕೆ, ಸಕ್ಸಸ್ ಆಗೋದಕ್ಕೆ ಎಲ್ಲರ ಪರಿಶ್ರಮ ಅಂತೂ ಇದ್ದೇ ಇರುತ್ತದೆ. ಐ ಲವ್ ಯು ಸಿನಿಮಾದ ಸಬ್ಜೆಕ್ಟ ಮೇಲೆ ನಂಬಿಕೆ ಇತ್ತು. ಹಾಗಾಗಿ ಎಲ್ಲರೂ ಅದರ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿದ್ದಾರೆ. ಈಗ ಎಲ್ಲರ ಪರಿಶ್ರಮಕ್ಕೆ ಫಲ ಸಿಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಚಿತ್ರದ ಹಂಚಿಕೆದಾರರಾದ ಮೋಹನ್ ಗೌಡ, ಮೋಹನ್ ದಾಸ್ ಪೈ, ಛಾಯಾಗ್ರಾಹಕ ಸುಜ್ಞಾನ್, ಸಂಗೀತ ನಿರ್ದೇಶಕ ಕಿರಣï ತೋಟಂಬೈಲು, ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಮೊದಲಾದವರು ಹಾಜರಿದ್ದು, ಚಿತ್ರದ ಬಗ್ಗೆ ತಮ್ಮ ಅನಿಸಿಕೆ, ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ ಚಿತ್ರತಂಡ ಕೇಕ್ ಕತ್ತರಿಸಿ ಐ ಲವ್ ಯು ಚಿತ್ರದ ಸಕ್ಸಸ್‍ನ ಖುಷಿಯನ್ನು ಹಂಚಿಕೊಂಡಿತು.

Facebook Comments