ಐಎಂಎ ಸಂಸ್ಥೆಯ ಮತ್ತೆರಡು ಮಳಿಗೆಗಳ ಮೇಲೆ ಎಸ್‍ಐಟಿ ದಾಳಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.25-ಐಎಂಎ ಸಂಸ್ಥೆಗೆ ಸೇರಿದ ಇನ್ನೂ ಎರಡು ಮಳಿಗೆಗಳ ಮೇಲೆ ಎಸ್‍ಐಟಿ ಇಂದು ದಾಳಿ ಮಾಡಿದೆ. ಯಶವಂತಪುರದ ಐಎಂಎ ಮಳಿಗೆ ಮತ್ತು ತಿಲಕ್‍ನಗರದಲ್ಲಿನ ಐಎಂಎ ಮಳಿಗೆಗಳಿಗೆ ಇಂದು ಬೆಳಗ್ಗೆ ಭೇಟಿ ನೀಡಿದ ಎಸ್‍ಐಟಿ ಅಧಿಕಾರಿಗಳ ತಂಡ ತಪಾಸಣೆ ಮಾಡುತ್ತಿದ್ದು, ಈ ಮಳಿಗೆಗಳಲ್ಲಿ ದೊರೆತಿರುವ ಚಿನ್ನಾಭರಣಗಳ ಮೌಲ್ಯ ಸಂಜೆ ವೇಳೆಗೆ ಗೊತ್ತಾಗಲಿದೆ.

ಈಗಾಗಲೇ ಜಯನಗರದ ಐಎಂಎ ಜ್ಯುವೆಲ್ಸ್ , ಶಿವಾಜಿನಗರದಲ್ಲಿನ ಐಎಂಎ ಗೋಲ್ಡ್ ಮತ್ತು ಐಎಂಎ ಜ್ಯುವೆಲ್ಸ್ ಮಳಿಗೆಗಳ ಮೇಲೆ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳು ಹಾಗೂ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಎಸ್‍ಐಟಿ ವಶಪಡಿಸಿಕೊಂಡಿದೆ.

ಐಎಂಎ ಸಂಸ್ಥೆಯ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‍ಐಟಿ ಈಗಾಗಲೇ ಐಎಂಎ ಮಳಿಗೆಗಳ ಮೇಲೆ ಶೋಧ ಮುಂದುವರೆಸಿ 41.62 ಕೆಜಿ ಚಿನ್ನಾಭರಣ, 14.5 ಕ್ಯಾರೆಟ್ ಡೈಮಂಡ್, 72.24 ಕೆಜಿ ಬೆಳ್ಳಿ, 60 ಕ್ಯಾರೆಟ್ ಹರಳುಗಳು ಹಾಗೂ 58 ಗುಂಡುಗಳೊಂದಿಗೆ .32 ರಿವಾಲ್ವರ್, 13.45 ಲಕ್ಷ ಹಣವನ್ನು ವಶಪಡಿಸಿಕೊಂಡಿದೆ.

ಐಎಂಎ ಗೋಲ್ಡ್ ಮತ್ತು ಐಎಂಎ ಜ್ಯುವೆಲ್ಸ್ ಮಳಿಗೆಗಳ ದಾಳಿಗಳಿಂದ ವಶಪಡಿಸಿಕೊಂಡಿರುವ ಚಿನ್ನಾಭರಣ ಹಾಗೂ ನಗದು ಸೇರಿದಂತೆ ಎಲ್ಲ ವಸ್ತುಗಳ ಮೌಲ್ಯ 11.72 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin