ರೋಷನ್ ಬೇಗ್ ಬೆನ್ನಲ್ಲೇ ಮತ್ತೊಬ್ಬ ಶಾಸಕರಿಗೆ ನಡುಕ ಶುರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.23- ಐಎಂಎ ಹಗರಣಕ್ಕೆ ಸಂಬಂಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಸಿಬಿಐ ಬಂಸಿರುವ ಹಿನ್ನೆಲೆಯಲ್ಲಿ ನಗರದ ಶಾಸಕರೊಬ್ಬರಿಗೆ ನಡುಕ ಉಂಟಾಗಿದೆ. ನಗರದ ಈ ಪ್ರಭಾವಿ ಶಾಸಕರ ಹೆಸರು ಐಎಂಎ ಹಗರಣದಲ್ಲಿ ಕೇಳಿ ಬಂದಿತ್ತು. ಎಸ್‍ಐಟಿ ಈಗಾಗಲೇ ಅವರನ್ನು ವಿಚಾರಣೆಗೊಳಪಡಿಸಿ ಕೆಲವು ಮಾಹಿತಿ ಗಳನ್ನು ಪಡೆದುಕೊಂಡಿದೆ.

ಈಗ ತನಿಖೆ ನಡೆಸುತ್ತಿರುವ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಈ ಪ್ರಭಾವಿ ಶಾಸಕರಿಗೆ ಸದ್ಯದಲ್ಲಿಯೇ ನೋಟೀಸ್ ನೀಡಬಹುದು.
ವಿಚಾರಣೆ ಸಂದರ್ಭದಲ್ಲಿ ಹಗರಣ ಸಂಬಂಧ ಕುರಿತಂತೆ ಸರಿಯಾದ ಮಾಹಿತಿಗಳು ಸಿಬಿಐಗೆ ಲಭ್ಯವಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.
ಬೆಂಗಳೂರಿನ ಸಿಸಿಬಿ ಪೆÇಲೀಸರು ತನಿಖೆ ನಡೆಸುತ್ತಿರುವ ಡ್ರಗ್ಸ್ ಜಾಲದ ಪ್ರಕರಣದಲ್ಲೂ ಈ ಶಾಸಕರ ಹೆಸರು ಕೇಳಿ ಬಂದಿದೆ.

Facebook Comments