ಹಾಸನದಲ್ಲೂ ಬಯಲಾಯ್ತು ಐಎಂಎ ಉಂಡೆನಾಮದ ಕರ್ಮಕಾಂಡ …?

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ : ರಾಜ್ಯದಲ್ಲಿ ಸಂಚಲನ ಮೂಡಿಸಿರೊ ಐಎಂಎ ಜುವೆಲ್ಸ್ ಕಂಪನಿ ವಂಚನ ಪ್ರಕರಣ ಬೆಳಕಿಗೆ ಬಂದ‌ ಬೆನ್ನಲ್ಲೆ ಜಿಲ್ಲೆಯಲ್ಲೂ ಸಹ ಹಲವರು ಹಣ ಹೂಡಿಕೆ‌ ಮಾಡಿರುವ ಅಂಶ ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲೆಯಲ್ಲಿ‌ ಸುಮಾರು 30 ಕೋಟಿಗೂ ಹೆಚ್ಚು‌ ಹಣ ಹೂಡಿಕೆಯಾಗಿದೆ ಎಂದು ವಂಚನೆಗೆ ಒಳಗಾದ ಹಲವರಿಂದ ಪಡೆದ ಮಾಹಿತಿಯಿಂದ ಅಂದಾಜಿಸಲಾಗಿದೆ.

60 ಕ್ಕೂ ಹೆಚ್ಚು ಮಂದಿ ಲಕ್ಷಾಂತರ ರೂ ಹೂಡಿಕೆ ಮಾಡಿದ್ದು ಒಬ್ಬ ವ್ಯಕ್ತಿ‌ ಕನಿಷ್ಟ ಎರಡರಿಂದ ಐದು‌‌ ಲಕ್ಷಕ್ಕೂ ಹೆಚ್ಚಿನ ಹಣ ಹೂಡಿಕೆ‌ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯ ಮುಸ್ಲಿಮ್ ಸಮಾಜದವರು ಹೆಚ್ಚು ಈ ಕಂಪನಿಯಲ್ಲಿ ಹೂಡಿಕೆ ಮಾಡಿರುವುದಾಗಿ‌ ಹೇಳಲಾಗಿದ್ದು ಇತರೆ ಸಮಾಜದವರು ಸಹ ವಂಚನೆಗೆ ಒಳಗಾಗಿರುವ ಮಾಹಿತಿ‌‌‌ ಹೊರಬಿದ್ದಿದೆ.

ಇನ್ನೂ ಉದ್ಯಮ ಹಾಗೂ ಇತರೆ ಮೂಲದಲ್ಲಿ ಉತ್ತಮ ಆದಾಯ ಹೊಂದಿರುವ ಕೆಲವರು 10 ರಿಂದ 50 ಲಕ್ಷ ‌ರೂ ಹೂಡಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.  ಹೆಚ್ಚು ಹಣಗಳಿಸೂ ದುರಾಸೆಯಿಂದ ಅಷ್ಟೋ ಇಷ್ಟೊ ಹಣ ಉಳಿಸಿ ಐಎಂಎ ನಲ್ಲಿ ಹೂಡಿಕೆ ಮಾಡಿದ್ದು ಕಂಪನಿ‌ ವಿರುದ್ಧ ಶಪಿಸುತ್ತಿದ್ದಾರೆ.

ಹಲವು ತಿಂಗಳು ತಾವು ಹೂಡಿಕೆ ಮಾಡಿದ್ದ ಹಣ ವಾಪಸ್ಸು ಬಾರದ ಕಾರಣ ವಿಚಲಿತರಾಗಿದ್ದು ಕಂಪನಿ‌ ಪ್ರಸ್ನಿಸಿದಾಗ ಇಲ್ಲದ ಸಲ್ಲದ ಉತ್ತರ ನೀಡಿ ಇಂದು ಅಸಲು ಹಣವನ್ನು ನೀಡದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿರುವ ಹಲವರು ಸಧ್ಯ ಬೆಂಗಳೂರಿನ ಐಎಂಎ ಕಂಪನಿ ಕಡೆಗೆ ಪ್ರಯಾಣ ಬೆಳಸಿದ್ದು ತಮಗೆ ಆಗಿರುವ ಅನ್ಯಾಯದ ವಿರುದ್ಧ ದೂರು ಸಲ್ಲಿಸಲು ಮುಂದಾಗಿದ್ದಾರೆ.

ಇನ್ನೂ ಐಎಂಎ ಕಂಪನಿಯಿಂದ ನಗರದ ತಣ್ಣೀರು ಹಳ್ಳದಲ್ಲಿ ಭೂಮಿ‌ ಖರೀದಿಯೂ ಮಾಡಲಾಗಿದೆ ಇಲ್ಲಿ ರೆಸಿಡೆನ್ಸಿಯಲ್ ಲೇಔಟ್ ನಿರ್ಮಾಣಕ್ಕೆ ಎಲ್ಲಾ ರೀತಿಯ ನಿರ್ಮಾಣ ಹಂತದ ಪ್ರಕ್ರಿಯೆಯೂ ನಡೆದಿದೆ‌ ಎಂಬ ಮಾಹಿತಿ ತಿಳಿದುಬಂದಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin